ಮೈಸೂರು:ಹೆಚ್ ಡಿ ಕುಮಾರಸ್ವಾಮಿ ಇದ್ದರೆ ಶಾಸಕ ಸಾ ರಾ ಮಹೇಶ್ ಹೀರೋ, ಅವರು ಇಲ್ಲದಿದ್ದರೆ ಸಾ ರಾ ಮಹೇಶ್ ಜೀರೋ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಲೇವಡಿ ಮಾಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಪ್ರತಿನಿಧಿಯಾಗಿ ಸಾ ರಾ ಮಹೇಶ್ ಹೋಗ್ತಿದ್ದಾರೆ. ಕುಮಾರಸ್ವಾಮಿ ಅವರ ಮುಖ ಇಟ್ಕೊಂಡು ಮಹೇಶ್ ಕೆಲಸ ಮಾಡುತ್ತಿದ್ದಾರೆ. ಅವರು ಇಲ್ಲದೇ ಶಕ್ತಿ ತೋರಿಸಲಿ ಎಂದು ಸವಾಲು ಹಾಕಿದರು.
ಜಿ ಟಿ ದೇವೇಗೌಡನ ನಾಯಕತ್ವದಲ್ಲಿ ಬೆಳೆದರೆ ಕಷ್ಟವಾಗಲಿದೆ ಎಂಬ ಚಿಂತೆಯಿಂದ, ಸಾ ರಾ ಮಹೇಶ್ ನಾಯಕತ್ವ ರೂಪಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಮುತ್ತು ಕೊಡುವವಳು ಬಂದಾಗ, ತುತ್ತು ಕೊಡುವವಳನ್ನು ಮರೆಯುತ್ತಿದ್ದಾರೆ. ಪಕ್ಷ ಕಟ್ಟಿದ ಹಳಬರನ್ನ ಮರೆತು, ಹೊಸಬರಿಗೆ ಹೆಚ್ಡಿಕೆ ಮಣೆ ಹಾಕಿದ್ದಾರೆ ಎಂದು ನೋವನ್ನು ಹೊರಹಾಕಿದರು.