ಮೈಸೂರು:ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೊದಲಿಂದಲೂ ನಮ್ಮ ಕುಟುಂಬದ ಸದಸ್ಯನಿದ್ದಂತೆ. ಆದರೆ, ನಾವು ಜೆಡಿಎಸ್‌ನಲ್ಲಿ ಉಳಿಯುವ ಯಾವುದೇ ಆಲೋಚನೆಗಳು ಇಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು. ಮೊನ್ನೆ ಮೊಮ್ಮಗಳು ಗೌರಿ ತೀರಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಮಾಧ್ಯಮಗಳ ಮುಂದೆ ಬಂದು ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿಯಿಂದ ನನ್ನ ಮನವೊಲಿಕೆ ನಡೆಯುತ್ತಿದೆ ಅನ್ನೋದು ಸುಳ್ಳು; ಶಾಸಕ ಜಿಟಿಡಿ - GT Devegowda Reaction On JDS
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ನಾನು ಮಾತನಾಡಿ ಎರಡು ವರ್ಷ ಆಗಿತ್ತು. ಅವರು, ನಿಖಿಲ್, ರೇವಣ್ಣ ಖುದ್ದಾಗಿ ಬಂದು ಧೈರ್ಯ ತುಂಬಿ ಹೋದರು. ಎಲ್ಲರ ಸಮ್ಮುಖದಲ್ಲಿ ಬಂದು ಮೊಮ್ಮಗಳ ಸಮಾಧಿ ನೋಡಿ ಸಾಂತ್ವನ ಹೇಳಿ ಹೋಗಿದ್ದಾರೆ ಎಂದು ಶಾಸಕ ಜಿ ಟಿ ದೇವೇಗೌಡ ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಯಿಂದ ಶಾಸಕ ಜಿಟಿಡಿ ಮನವೊಲಿಕೆ ನಡೆಯುತ್ತಿದೆ ಅನ್ನೋದು ಸುಳ್ಳು. ನಿಖಿಲ್ ಮತ್ತು ನನ್ನ ಮಗ ಹರೀಶ್‌ಗೌಡ ಮೊದಲಿಂದಲೂ ಒಳ್ಳೆಯ ಗಳೆಯರು. ಅದೇ ವಿಶ್ವಾಸ ಅವರಿಬ್ಬರಲ್ಲೂ ಈಗಲೂ ಇದೆ. ನಾವು ದೂರ ಇದ್ದಾಗಲೂ ಅಷ್ಟೇ ಪ್ರೀತಿ ಇದೆ. ಈಗಲೂ ನಿರಂತರವಾಗಿ ಅಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ನಮ್ಮ ಕುಟುಂಬದ ಜೊತೆ ನಿಖಿಲ್‌ಗೆ ಪ್ರೀತಿ ವಿಶ್ವಾಸಕ್ಕೇನು ಕೊರತೆ ಇಲ್ಲ. ರಾಜಕಾರಣವೇ ಬೇರೆ, ಪ್ರೀತಿ ವಿಶ್ವಾಸವೇ ಬೇರೆ ಎಂದು ತಮ್ಮ ಮತ್ತು ನಿಖಿಲ್ ಒಡನಾಟದ ಬಗ್ಗೆ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ನಾನು ಮಾತನಾಡಿ ಎರಡು ವರ್ಷ ಆಗಿತ್ತು. ಅವರು, ನಿಖಿಲ್, ರೇವಣ್ಣ ಖುದ್ದಾಗಿ ಬಂದು ಧೈರ್ಯ ತುಂಬಿ ಹೋದರು. ಎಲ್ಲರ ಸಮ್ಮುಖದಲ್ಲಿ ಬಂದು ಮೊಮ್ಮಗಳ ಸಮಾಧಿ ನೋಡಿ ಸಾಂತ್ವನ ಹೇಳಿ ಹೋಗಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಆ ವಿಚಾರವನ್ನು ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.