ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಪತ್ರದಲ್ಲಿ ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡ ಅವರ ಪುತ್ರನ ಭಾವಚಿತ್ರ ಇರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಅವರಿಂದ ತೆರವಾದ ಸ್ಥಾನಕ್ಕೆ ಸೆ.3ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಪ್ರಚಾರ ಪತ್ರದಲ್ಲಿ ಶಾಸಕ ಜಿ ಟಿ ದೇವೇಗೌಡರ ಪುತ್ರ ಜಿ ಟಿ ಹರೀಶ್ ಗೌಡ ಭಾವಚಿತ್ರವಿದೆ. ಇದು ತೀವ್ರ ಕುತೂಹಲ ಕೆರಳಿಸಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾವಚಿತ್ರ ಒಂದು ಕಡೆಯಾದರೆ, ಸಿದ್ದರಾಮಯ್ಯ ಪುತ್ರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಭಾವಚಿತ್ರ, ಮತ್ತೊಂದು ಕಡೆ ಜಿ ಟಿ ದೇವೇಗೌಡರ ಪುತ್ರ ಜಿ ಟಿ ಹರೀಶ್ ಗೌಡ ಭಾವಚಿತ್ರವಿದೆ. ಈಗಾಸಗಲೇ ಜಿ ಟಿ ದೇವೇಗೌಡ ಜಿಡಿಎಸ್‍ನೊಂದಿಗೆ ಮುನಿಸಿಕೊಂಡು ಪಕ್ಷದಿಂದ ದೂರ ಉಳಿದಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜಿಟಿಡಿ ನಡುವೆ ಆಗಾಗ ವಾಕ್ಸಮರ ಸಹ ನಡೆಯುತ್ತಲೇ ಇರುತ್ತದೆ. ಹೀಗಾಗಿ, ಇದೀಗ ಅವರ ಪುತ್ರನ ಫೋಟೋ ಕಾಂಗ್ರೆಸ್ ಪ್ರಚಾರದ ಪತ್ರದಲ್ಲಿ ಕಂಡಿರುವುದು ಚರ್ಚೆಗೆ ಗ್ರಾಸವಾಗಿದೆ.