ಮೈಸೂರು: ನಂಜನಗೂಡು ತಾಲೂಕಿನ ಕಪಿಲಾ ಸ್ನಾನ ಘಟ್ಟದಲ್ಲಿ ಭಕ್ತಾದಿಗಳು ನೀರಿಗೆ ಇಳಿಯಬಾರದು ಎಂದು ನಂಜುಂಡೇಶ್ವರ ದೇವಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಆದರೂ ಸ್ನಾನಘಟ್ಟದಲ್ಲಿ ಹೆಚ್ಚಿನ ಭಕ್ತರು ಸ್ನಾನ ಮಾಡಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ನಂಜನಗೂಡಿನ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ನೀರು ಹೆಚ್ಚಾಗಿದ್ದು, ಈ ಸ್ಥಳಕ್ಕೆ ಭಕ್ತಾದಿಗಳಿಗೆ, ಸ್ಥಳೀಯರಿಗೆ ಹಾಗೂ ಮುಡಿ ಸೇವೆಗೆ ದೇವಸ್ಥಾನ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.