ಕರ್ನಾಟಕ

karnataka

ETV Bharat / state

ಕೊರೊನಾ ಗೆದ್ದವರು: 98 ವರ್ಷದ ವೃದ್ಧ ವ್ಯಕ್ತಿಗೆ ಹೂ ಮಳೆಯ ಸ್ವಾಗತ - ಕೊರೊನಾ ಗೆದ್ದ 98 ವರ್ಷದ ವೃದ್ಧ

ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆಂಬ್ಯುಲೆನ್ಸ್ ಮೂಲಕ ಮನೆಗೆ ಬಂದ 98ರ ಹರೆಯದ ವೃದ್ಧನಿಗೆ ಮನೆಯವರು ಅಕ್ಕರೆಯ ಸ್ವಾಗತ ಕೋರಿದ್ದಾರೆ.

Grand Welcome to the 98 year old Healed from Corona in Mysore
98ರ ಹರೆಯದ ವೃದ್ಧನಿಗೆ ಮನೆಯವರು ಅದ್ಧೂರಿ ಸ್ವಾಗತ

By

Published : Jun 8, 2021, 9:52 AM IST

ಮೈಸೂರು:ಇಲ್ಲೊಬ್ಬರು 98 ವರ್ಷ ವೃದ್ಧ ವ್ಯಕ್ತಿ ಕೊರೊನಾ ರೋಗ ಗೆದ್ದು ಬಂದಿದ್ದು ನಗರ ಪಾಲಿಕೆ ಸದಸ್ಯೆ ಹಾಗೂ ಕುಟುಂಬಸ್ಥರು ಹೂಮಳೆಗೈದು ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡರು.

ನಗರದ ವಿದ್ಯಾರಣ್ಯಪುರಂ ನಿವಾಸಿ ಸೂರ್ಯನಾರಾಯಣ್ (98) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆಂಬ್ಯುಲೆನ್ಸ್ ಮೂಲಕ ಮನೆಗೆ ಆಗಮಿಸಿದಾಗ ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಕೊರೊನಾ ಬಂದವರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಅವರನ್ನು ದೂರ ಮಾಡುವುದು ಬೇಡ ಎನ್ನುವ ಉದ್ದೇಶದಿಂದ ಈ ರೀತಿಯ ಸ್ವಾಗತ ಕೋರಿದ್ದೇವೆ ಎಂದರು.

For All Latest Updates

ABOUT THE AUTHOR

...view details