ಮೈಸೂರು: ಗ್ರಾಮ ಪಂಚಾಯತ್ ಮೊದಲನೇ ಹಂತದ ಚುನಾವಣೆ 268 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 7,416 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೊದಲನೇ ಹಂತದಲ್ಲಿ 2303 ಸದಸ್ಯ ಸ್ಥಾನಗಳಿಗೆ, 148 ಗ್ರಾಮ ಪಂಚಾಯತ್ಗೆ ಚುನಾವಣೆ ನಡೆಯಲಿದೆ. ಅದರಲ್ಲಿ 7,684 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 268 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. 7,416 ಮಂದಿ ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತವಾಗಿದೆ.
ಹುಣಸೂರಿನ 41 ಗ್ರಾ.ಪಂ.ಯ 595 ಸದಸ್ಯ ಸ್ಥಾನಗಳಿಗೆ 2014 ಕಣದಲ್ಲಿದ್ದಾರೆ. ಕೆ.ಆರ್. ನಗರ ತಾಲೂಕಿನ 34 ಗ್ರಾ.ಪಂ.ಯ 562 ಸ್ಥಾನಗಳಿಗೆ 1,745 ಮಂದಿ ಅಖಾಡದಲ್ಲಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ 34 ಗ್ರಾ.ಪಂ.ನ 549 ಸ್ಥಾನಗಳಿಗೆ 1,755 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನು ಓದಿ:ಉಡುಪಿಯಲ್ಲಿ ಇ.ಡಿ. ವಿರುದ್ಧ ಸಿಎಫ್ಐ ಸಂಘಟನೆ ಪ್ರತಿಭಟನೆ: ಕೆಲವರು ಪೊಲೀಸ್ ವಶಕ್ಕೆ
ಹೆಚ್.ಡಿ. ಕೋಟೆ ತಾಲೂಕಿನ 28 ಗ್ರಾ.ಪಂ.ನ 407 ಸ್ಥಾನಗಳಿಗೆ 1,286 ಮಂದಿ ಸ್ಪರ್ಧೆಯಲ್ಲಿದ್ದಾರೆ. ಸರಗೂರಿನ 13 ಗ್ರಾ.ಪಂ.ಯ 190 ಸ್ಥಾನಗಳಿಗೆ 616 ಮಂದಿ ಕಣದಲ್ಲಿದ್ದಾರೆ. ಮೊದಲನೇ ಹಂತದಲ್ಲಿ ಮೂರು ಕಡೆ ಅಭ್ಯರ್ಥಿಗಳೇ ಸ್ಪರ್ಧೆಗಿಳಿದಿಲ್ಲ.