ಮೈಸೂರು: ಗ್ರಾಮ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವುದರಿಂದ, ಸ್ಥಳೀಯ ಮಟ್ಟದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಕಾಂಗ್ರೆಸ್ನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಭೇಟಿಗೆ ಆಕಾಂಕ್ಷಿಗಳು ಆಗಮಿಸಿದ್ದಾರೆ.
ಗ್ರಾ.ಪಂ.ಚುನಾವಣೆ: ಸಿದ್ದರಾಮಯ್ಯ ನಿವಾಸದೆದುರು ಟಿಕೆಟ್ ಆಕಾಂಕ್ಷಿಗಳ ದಂಡು - ಮೈಸೂರು ಸುದ್ದಿ
ಗ್ರಾಮ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ನಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ದಂಡು ಸಿದ್ದರಾಮಯ್ಯ ನಿವಾಸದತ್ತ ದೌಡಾಯಿಸಿದೆ.
ಸಿದ್ದರಾಮಯ್ಯ ನಿವಾಸದ ಎದುರು ಆಕಾಂಕ್ಷಿಗಳ ದಂಡು
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕೆಲವರ ಭೇಟಿಗಷ್ಟೇ ಅವಕಾಶ ನೀಡಿದರು. ಕೋವಿಡ್ ಭೀತಿಯಿಂದ ಹೆಚ್ಚಿನ ಜನರ ಜತೆ ಮಾತುಕತೆಗೆ ಅವಕಾಶ ನೀಡಲಿಲ್ಲ. ಆದರೂ, ಪ್ರತಿಪಕ್ಷ ನಾಯಕರ ಭೇಟಿಗೆ ಸಾಮಾಜಿಕ ಅಂತರ ಮರೆತು ಕಾರ್ಯಕರ್ತರು ಜಮಾವಣೆಗೊಂಡಿದ್ದು ಕಂಡುಬಂತು.