ಕರ್ನಾಟಕ

karnataka

ETV Bharat / state

ಗೌರಿ-ಗಣೇಶ ಹಬ್ಬದಲ್ಲಿ ನೆನಪಾಗುತ್ತೆ ಬಾಗಿನ... ಮೊರ ಮಾಡುವವರ ಜೀವನ ಕಠಿಣ - ಜೀವನ ನಿರ್ವಹಣೆ

ಗೌರಿ-ಗಣೇಶ ಹಬ್ಬ ಬಂತು ಎಂದರೆ ಮೊದಲು ನೆನಪಾಗುವುದು ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವುದು. ನಮ್ಮ ಸಂಪ್ರದಾಯದಲ್ಲಿ ಬಾಗಿನ ಮುಖ್ಯವಾದ ವಸ್ತು. ಹೀಗಾಗಿ ಈಗ ಮೊರ ಮಾಡುವವರ ಕೆಲಸ ಜಿಲ್ಲೆಯಾದ್ಯಂತ ಭರದಿಂದ ಸಾಗಿದೆ. ಆದರೆ ಇದನ್ನು ತಯಾರಿಸುವವರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ.

ಗೌರಿ ಗಣೇಶ ಹಬ್ಬದಲ್ಲಿ ನೆನಪಾಗುತ್ತೆ ಬಾಗಿನ; ಮೊರ ಮಾಡುವವರ ಜೀವನ ಕಠಿಣ

By

Published : Sep 1, 2019, 10:28 AM IST

Updated : Sep 1, 2019, 11:30 AM IST

ಮೈಸೂರು: ಗೌರಿ-ಗಣೇಶ ಹಬ್ಬ ಬಂತು ಎಂದರೆ ಮೊದಲು ನೆನಪಾಗುವುದು ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವುದು. ನಮ್ಮ ಸಂಪ್ರದಾಯದಲ್ಲಿ ಬಾಗಿನ ಮುಖ್ಯವಾದ ವಸ್ತು. ಹೀಗಾಗಿ ಈಗ ಮೊರ ಮಾಡುವವರ ಕೆಲಸ ಜಿಲ್ಲೆಯಾದ್ಯಂತ ಭರದಿಂದ ಸಾಗಿದೆ. ಆದರೆ ಇದನ್ನು ತಯಾರಿಸುವವರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಈ ಗೌರಿ ಹಬ್ಬವು ತುಂಬಾ ವಿಶೇಷತೆಯಿಂದ ಕೂಡಿರುತ್ತದೆ. ಶುಭ, ಸಂಮೃದ್ಧಿಯ ಸಂಕೇತವಾಗಿ ನಾವು ಬಾಗಿನ ಕೊಡುವುದು ನಮ್ಮ ಸಂಪ್ರದಾಯ. ಅರಿಶಿಣ, ಕುಂಕುಮ, ಹಲವಾರು ವಿವಿಧ ಧಾನ್ಯಗಳು, ಅಕ್ಕಿ, ಬೆಲ್ಲ, ಬಳೆ ಹಾಗೂ ಕೆಲವು ವಿಧದ ಪದಾರ್ಥಗಳನ್ನು ಇಟ್ಟು ಬಿದಿರಿನ ಮೊರದಲ್ಲಿ ಹಾಕಿ ಅದರ ಮೇಲೆ ಇನ್ನೊಂದು ಮೊರದಿಂದ ಮುಚ್ಚಿ ಕೊಡುವುದೇ ಬಾಗಿನ.

ಗೌರಿ ಗಣೇಶ ಹಬ್ಬದಲ್ಲಿ ನೆನಪಾಗುತ್ತೆ ಬಾಗಿನ; ಮೊರ ಮಾಡುವವರ ಜೀವನ ಕಠಿಣ

ಬಾಗಿನ ಕೊಡಲು ಮುಖ್ಯವಾಗಿ ಬೇಕಾಗಿರುವುದು ಬಿದಿರಿನ ಮೊರ.‌ ಈಗ ಮೊರದ ಬೇಡಿಕೆ ಹೆಚ್ಚಿದ್ದು, ನಗರದ ಪ್ರಮುಖ ಜನನಿಬಿಡ ಸ್ಥಳಗಳಾದ ನಂಜುಮಳಿಗೆ, ಬಂಬೂಬಜಾರ್, ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿ ಹೀಗೆ ಹಲವಾರು ಕಡೆ ಇದರ ತಯಾರಿಕೆ ಬಲು ಜೋರಾಗಿ ನಡೆಯುತ್ತಿದ್ದು, 40ಕ್ಕೂ ಹೆಚ್ಚು ಕುಶಲಕರ್ಮಿಗಳು ಸೇರಿ ಬಿದಿರಿನಿಂದ ಮೊರ, ಬುಟ್ಟಿ, ಬೀಸಣಿಕೆ ಇತ್ಯಾದಿ ಮನೆಯ ಬಳಕೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಸಣ್ಣ ಮೊರ, ದೊಡ್ಡ ಮೊರ ಹೀಗೆ ವಿವಿಧ ರೀತಿಯ ಮೊರಗಳನ್ನು ನೇಯುತ್ತಿದ್ದು, ದೊಡ್ಡ ಗಾತ್ರದ ಮೊರಕ್ಕೆ 120 ರೂಪಾಯಿ, ಚಿಕ್ಕ ಮೊರಕ್ಕೆ 80 ರೂಪಾಯಿ ಹಣವನ್ನು ನಿಗದಿಗೊಳಿಸಿದ್ದಾರೆ.

ಜೀವನ ನಿರ್ವಹಣೆ ಕಷ್ಟಕರ;

ಹಿಂದೆ ಮೊರ ಎಂಬುದು ದಿನನಿತ್ಯ ಬಳಕೆಯ ವಸ್ತುವಾಗಿತ್ತು. ಆದರೆ ಆಧುನಿಕ ವಸ್ತುಗಳ ಭರಾಟೆಯಲ್ಲಿ ಹಾಗೂ ಕಚ್ಚಾ ಸಾಮಗ್ರಿಗಳ ಕೊರತೆಯಿಂದಾಗಿ ಈಗ ಬಿದಿರಿನ ಈ ಮೊರ ಕೇವಲ ಹಬ್ಬಗಳಲ್ಲಿ ಮಾತ್ರ ಎನ್ನುವಂತಾಗಿದೆ. ನಮ್ಮ ಸಂಪ್ರದಾಯಗಳನ್ನು ಉಳಿಸುವ ಕಡೆ ಮಾತ್ರ ಇದನ್ನು ಬಳಸಲಾಗುತ್ತಿದ್ದು, ಇದರ ಜೊತೆಗೆ ಇವುಗಳನ್ನು ತಯಾರಿಸುವ ವ್ಯಕ್ತಿಗಳು ಈಗ ಜೀವನ ನಿರ್ವಹಣೆ ಕಷ್ಟವಾದ್ದರಿಂದ ಬದಲಿ ಉದ್ಯೋಗ ಹುಡುಕಿಕೊಂಡಿದ್ದಾರೆ. ಹೊಸ ತಲೆಮಾರು ಸಹ ಈ ಕಸುಬನ್ನು ಮಾಡಲು ಹಿಂಜರಿಯುತ್ತಿದೆ.

Last Updated : Sep 1, 2019, 11:30 AM IST

ABOUT THE AUTHOR

...view details