ಕರ್ನಾಟಕ

karnataka

ETV Bharat / state

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಒಂದೇ ದಿನದಲ್ಲಿ ರದ್ದು: ಕಾರಣ ನೀವೇ ನೋಡಿ.? - ಮೈಸೂರು ಜಿಲ್ಲಾಧಿಕಾರಿ

ಮಧ್ಯಾಹ್ನ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ವರ್ಗಾವಣೆಗೆ ಸರ್ಕಾರ ಆದೇಶ ನೀಡಿತ್ತು. ಸ್ಥಳೀಯ ಶಾಸಕರ ಒತ್ತಾಯದ ಮೇರೆಗೆ ಸಂಜೆ ಆದೇಶವನ್ನು ರದ್ದು ಮಾಡಲಾಯಿತು.

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ರದ್ದು

By

Published : Aug 22, 2019, 11:34 PM IST

ಮೈಸೂರು:ನಾಡ ಹಬ್ಬ ದಸರಾ ಸಿದ್ಧತೆಗೆ ಅಡಚಣೆ ಆಗುವುದೆಂಬ ಉದ್ದೇಶದಿಂದ ವರ್ಗಾವಣೆಗೊಂಡಿದ್ದ ಮೈಸೂರು ಜಿಲ್ಲಾಧಿಕಾರಿ ಆದೇಶವನ್ನು ರದ್ದುಗೊಳಿಸಿದೆ.

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ರದ್ದು

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರನ್ನು ಮಧ್ಯಾಹ್ನ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.

ನಿತೇಶ್ ಪಟೇಲ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ಆದೇಶ ಹೊರಡಿಸಿಲಾಗಿತ್ತು.

ದಸರಾ ಗಜ ಪಯಣದ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಭಾಗವಹಸಿದ್ದರು. ನಂತರ ಸಚಿವರ ಜತೆ ಜಿಲ್ಲಾಧಿಕಾರಿಗಳು ನೆರೆ ವೀಕ್ಷಣೆಗೆಂದು ತೆರಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಸಚಿವರಿಗೆ ದಸರಾ ಸಿದ್ಧತೆಗಳು ಆರಂಭವಾಗಿವೆ. ಕಳೆದ ವರ್ಷ ದಸರಾ ಹಬ್ಬದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ ಅನುಭವಿದೆ. ಹಾಗಾಗಿ ಅವರನ್ನೇ ಮುಂದುವರೆಸುವಂತೆ ಶಾಸಕರು ಸಚಿವರ ಮೇಲೆ ಒತ್ತಡ ಹೇರಿದರು.

ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದ ಸಚಿವರು ಸಿಎಂ ಜೊತೆ ಮಾತನಾಡಿ, ಸಂಜೆ ವೇಳೆಗೆ ವರ್ಗಾವಣೆಯನ್ನು ರದ್ದುಗೊಳಿಸಿ ದಸರಾ ಮುಗಿಯುವವರೆಗೆ ಮೈಸೂರು ಜಿಲ್ಲಾಧಿಕಾರಿಯಾಗಿ ಮುಂದುವರೆಯಲು ಸೂಚನೆ ನೀಡಿದ್ದಾರೆ.

ABOUT THE AUTHOR

...view details