ಮೈಸೂರು:ಎಪಿಎಂಸಿ ಹಾಗು ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಅಧಿಕಾರ ಗದ್ದುಗೆಗಾಗಿ ಕಾದಿದ್ದ ಆಕಾಂಕ್ಷಿಗಳಿಗೆ ಈ ಮೂಲಕ ಶುಭ ಸುದ್ದಿ ಸಿಕ್ಕಿದೆ.
ಚಾಮುಂಡಿ ಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಕೋವಿಡ್ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು, ಕೋಆಪರೇಟಿವ್, ಸಹಕಾರಿ ಸಂಘ ಸಂಸ್ಥೆಗಳ ಚುನಾವಣೆಗೆ ಸರ್ಕಾರ ತಡೆ ಹಿಡಿದಿತ್ತು. ಆದರೆ ಈಗ ಚುನಾವಣೆ ನಡೆಸಲು ಅನುಮತಿ ನೀಡಿದೆ ಎಂದರು.