ಕರ್ನಾಟಕ

karnataka

ಮೈಸೂರಿನಲ್ಲಿ ಹಲವು ಸಾರ್ವಜನಿಕ ಸ್ಥಳಗಳ ಒತ್ತುವರಿ ಪ್ರಕರಣಗಳಿವೆ : ಎಂ. ಲಕ್ಷ್ಮಣ್ ಆರೋಪ

ಇತ್ತೀಚೆಗೆ ಮೈಸೂರು ನಗರ ಪೊಲೀಸ್ ಕಮಿಷನರ್ ಕಚೇರಿಯೇ ಪಾರ್ಕ್ ಸ್ಥಳದಲ್ಲಿ ನಿರ್ಮಾಣವಾಗಿತ್ತು ಎಂದು ವ್ಯಕ್ತಿವೊಬ್ಬರು‌ ಹೈಕೋರ್ಟ್​​ನಲ್ಲಿ ಪ್ರಕರಣವನ್ನು ದಾಖಲಿಸಿದ್ದನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದರು. ಮೈಸೂರು ನಗರದಲ್ಲಿ 400ಕ್ಕೂ ಹೆಚ್ಚು ಪಾರ್ಕ್​​ಗಳಿವೆ.‌.

By

Published : Apr 7, 2021, 7:21 PM IST

Published : Apr 7, 2021, 7:21 PM IST

Updated : Apr 7, 2021, 7:51 PM IST

m lakshman
ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಮೈಸೂರು: ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಸಾವಿರಾರು ಪ್ರಕರಣಗಳು ನಗರದಲ್ಲಿ ಕಾಣಬಹುದಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೂಮಿಯ ಬೆಲೆ ದಿನ ನಿತ್ಯ ಹೆಚ್ಚುತ್ತಿದೆ. ಇದನ್ನು ತಿಳಿದ ಜನರು ಭೂಮಿ ಒತ್ತುವರಿ ಮಾಡಿಕೊಳ್ಳತ್ತಿದ್ದಾರೆ. ಅನೇಕ ಉದ್ದೇಶಗಳಿಗೆ ಮೀಸಲಿಟ್ಟ ಸ್ಥಳಗಳಲ್ಲಿ ಮನೆ ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು ಅನುಮತಿ ಪಡೆಯದೆ ನಿರ್ಮಾಣ ಮಾಡುತ್ತಿರುವ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿ ನಗರದಲ್ಲಿ ಕಾಣಬಹುದಾಗಿದೆ.

ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕರ್ನಾಟಕ ಒಪನ್ ಪಬ್ಲಿಕ್ ಪ್ಲೇಸ್ ಆ್ಯಕ್ಟ್ ಪ್ರಕಾರ ಪ್ರತಿ ಬಡಾವಣೆಯಲ್ಲಿ ಒಪನ್ ಪ್ಲೇಸ್ ಬಿಡಲೇಬೇಕು ಎಂಬ ಕಾನೂನಿದೆ. ಹಾಗೂ ಒಂದು ಬಡಾವಣೆ ನಿರ್ಮಾಣ ಮಾಡಬೇಕಾದರೆ ನಿಗದಿತವಾಗಿ ಪಾರ್ಕ್​​ಗೆ ಜಾಗ ಬಿಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕೆಲಸ ಆಗುತ್ತಿಲ್ಲ.

ಈ ವಿಚಾರಗಳಲ್ಲಿ ಕೆಲವು ಕಡೆ ಸರ್ಕಾರವೇ ನಿಯಮವನ್ನು ಉಲ್ಲಂಘನೆ ಮಾಡಿ ಆ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದು, ಜಿಮ್ ನಿರ್ಮಾಣ ಮಾಡುವುದು, ವಿಶೇಷ ಚೇತನರಿಗೆ ಅಂಗಡಿಗಳನ್ನು, ಮೀನಿನ ಬೂತ್​ಗಳನ್ನು ನಿರ್ಮಾಣ ಮಾಡುವುದನ್ನು ನಾವು ನೋಡ ಬಹುದಾಗಿದೆ ಎಂದರು.

ಇತ್ತೀಚೆಗೆ ಮೈಸೂರು ನಗರ ಪೊಲೀಸ್ ಕಮಿಷನರ್ ಕಚೇರಿಯೇ ಪಾರ್ಕ್ ಸ್ಥಳದಲ್ಲಿ ನಿರ್ಮಾಣವಾಗಿತ್ತು ಎಂದು ವ್ಯಕ್ತಿವೊಬ್ಬರು‌ ಹೈಕೋರ್ಟ್​​ನಲ್ಲಿ ಪ್ರಕರಣವನ್ನು ದಾಖಲಿಸಿದ್ದನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದರು. ಮೈಸೂರು ನಗರದಲ್ಲಿ 400ಕ್ಕೂ ಹೆಚ್ಚು ಪಾರ್ಕ್​​ಗಳಿವೆ.‌ ಇದರಲ್ಲಿ ಸುಮಾರು 50 ಪಾರ್ಕ್​​ಗಳನ್ನು ಬಿಟ್ಟರೆ ಉಳಿದೆಲ್ಲಾ ಪಾರ್ಕ್​​ಗಳು ಅಭಿವೃದ್ಧಿ ಆಗಿಲ್ಲ ಹಾಗೂ ಸಂರಕ್ಷಣೆ ಸಹ ಆಗುತ್ತಿಲ್ಲ.

ಇದನ್ನೂ ಓದಿ:ಶಿವಮೊಗ್ಗದ ಆರೋಗ್ಯ ಕೇಂದ್ರಗಳ ಸೇವೆ ಕುರಿತು ವೈದ್ಯರಿಂದ ಮಾಹಿತಿ: ಸಾರ್ವಜನಿಕರಿಗೂ ತೃಪ್ತಿ

ಕೆಲವು ಪಾರ್ಕ್​​​ಗಳನ್ನು ಸರ್ಕಾರಿ ಕಚೇರಿಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಮತ್ತೆ ಕೆಲವು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು, ಸ್ವಂತಕ್ಕೆ ಉಪಯೋಗಿಸಿ ಕೊಳ್ಳತ್ತಿರುವುದನ್ನು ನಾವು ನೋಡ ಬಹುದಾಗಿದೆ. ಈ ಎಲ್ಲಾ ಬೆಳವಣಿಗಳು ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅವರು ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಂಡವರಂತೆ ಕಾಣುತ್ತಿಲ್ಲ ಎಂದು ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.

Last Updated : Apr 7, 2021, 7:51 PM IST

ABOUT THE AUTHOR

...view details