ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಇ-ತ್ಯಾಜ ಅಭಿಯಾನಕ್ಕೆ ಉತ್ತಮ ಸ್ಪಂದನೆ; 2,327 ಕೆಜಿ ತ್ಯಾಜ್ಯ ಸಂಗ್ರಹ! - 2327 ಕೆ.ಜಿ. ಇ-ತ್ಯಾಜ್ಯವನ್ನು ನಗರ ಪಾಲಿಕೆಯಿಂದ ಸಂಗ್ರಹ

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಇ-ತ್ಯಾಜ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಗರದಲ್ಲಿ ಒಟ್ಟು 2327 ಕೆಜಿ ಇ-ತ್ಯಾಜ್ಯವನ್ನು ನಗರ ಪಾಲಿಕೆ ಸಂಗ್ರಹ ಮಾಡಿದೆ.

ನಗರ ಪಾಲಿಕೆ ವತಿಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

By

Published : Oct 17, 2019, 7:44 PM IST

ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಇ-ತ್ಯಾಜ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಗರದಲ್ಲಿ ಒಟ್ಟು 2,327 ಕೆಜಿ ಇ-ತ್ಯಾಜ್ಯವನ್ನು ನಗರ ಪಾಲಿಕೆ ಸಂಗ್ರಹ ಮಾಡಿದೆ.

ವಿದ್ಯಾರಣ್ಯಪುರಂನ ಶೂನ್ಯ ಘನತ್ಯಾಜ ನಿರ್ವಹಣಾ ಘಟಕ 1ರಲ್ಲಿ 127ಕೆಜಿ, ಜೆ.ಪಿ.ನಗರದ ಶೂನ್ಯ ಘನತ್ಯಾಜ ನಿರ್ವಹಣಾ ಘಟಕ 2ರಲ್ಲಿ 150 ಕೆಜಿ, ಹೈ-ಟೆನ್ಸನ್ ರ‍ಸ್ತೆಯಲ್ಲಿರುವ ಒಣ ತ್ಯಾಜ್ಯ ಸಂಗ್ರಹಣಾ ಘಟಕ 3ರಲ್ಲಿ 450 ಕೆಜಿ, ಯಾದವಗಿರಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ 4ರಲ್ಲಿ 90 ಕೆಜಿ, ಕುಂಬಾರಕೊಪ್ಪಲಿನಲ್ಲಿರುವ ಶೂನ್ಯ ಘನತ್ಯಾಜ ನಿರ್ವಹಣಾ ಘಟಕ 5ರಲ್ಲಿ 240 ಕೆಜಿ, ಬನ್ನಿಮಂಟಪದ ಜೋಡಿ ತೆಂಗಿನಮರದ ರಸ್ತೆಯಲ್ಲಿರುವ ಶೂನ್ಯ ಘನತ್ಯಾಜ ನಿರ್ವಹಣಾ ಘಟಕ 6ರಲ್ಲಿ 190 ಕೆಜಿ ತ್ಯಾಜ ಸಂಗ್ರಹಿಸಿದೆ.

ನಗರ ಪಾಲಿಕೆ ವತಿಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

ಹಾಗೆಯೇ ಬನ್ನಿಮಂಟಪದ ಜೋಡಿ ತೆಂಗಿನಮರದ ರಸ್ತೆಯಲ್ಲಿರುವ ಶೂನ್ಯ ಘನತ್ಯಾಜ ನಿರ್ವಹಣಾ ಘಟಕ 7 ರಲ್ಲಿ 30 ಕೆಜಿ, ಕೆಸರೆ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ 8ರಲ್ಲಿ 50 ಕೆಜಿ, ಕೆಸರೆಯ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ 9ರಲ್ಲಿ 1000 ಕೆಜಿ ಸೇರಿದಂತೆ ಒಟ್ಟು 2,327 ಕೆಜಿ ಇ-ತ್ಯಾಜ್ಯವನ್ನು ನಗರ ಪಾಲಿಕೆ ಸಂಗ್ರಹಿಸಿದೆ. ಸೆ.17ರಂದು ಇ-ತ್ಯಾಜ್ಯವನ್ನು ಸಂಗ್ರಹಿಸಲು ನಗರ ಪಾಲಿಕೆ ವತಿಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.

ABOUT THE AUTHOR

...view details