ಕರ್ನಾಟಕ

karnataka

ETV Bharat / state

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ - ಬೆಂಗಳೂರು-ಮೈಸೂರು ಮಧ್ಯೆ ಚಲಿಸುವ ರೈಲುಗಳು

ಮೈಸೂರು-ಬೆಂಗಳೂರು ಮಧ್ಯೆ ಪ್ರಯಾಣಿಸುವವರಿಗೊಂದು ಸಿಹಿ ಸುದ್ದಿ. ಇನ್ನು ಮುಂದೆ ಅಂದರೆ ನವೆಂಬರ್‌ 13ರಿಂದ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವವರು ಇನ್ನೂ ವೇಗವಾಗಿ ತಮ್ಮ ಗುರಿ ತಲುಪಬಹುದು.

ಮೈಸೂರು ರೈಲ್ವೆ ಸ್ಟೇಷನ್​

By

Published : Nov 11, 2019, 3:03 PM IST

ಮೈಸೂರು:ಪ್ರಯಾಣಿಕರ ಒತ್ತಾಯದ ಮೇರೆಗೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ 11 ರೈಲುಗಳ ವೇಗವನ್ನು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ತಿಳಿಸಿದೆ. ಆದರೆ ಪ್ರಸ್ತುತ 6 ರೈಲುಗಳ ವೇಗ ಹೆಚ್ಚಿಸಲಾಗಿದೆ.

ಮೈಸೂರು ರೈಲ್ವೆ ಜಂಕ್ಷನ್​

ಈವರೆಗೂ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಆದರೆ ಇದೀಗ ರೈಲುಗಳ ಪ್ರಯಾಣದ ಅವಧಿಯು ಕನಿಷ್ಠ ಎರಡೂಕಾಲು ಗಂಟೆಗೆ ಇಳಿದಿದೆ. ರೈಲಿನ ವೇಗವನ್ನು ತುಸು ಹೆಚ್ಚಿಸಲಾಗಿದ್ದು, ಗಂಟೆಗೆ 100 ಕಿ.ಮೀ. ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ.

ಆದರೆ ಈಗ ರೈಲುಗಳು ಗರಿಷ್ಠ 90ರಿಂದ 95 ಕಿ.ಮೀ. ವೇಗದಲ್ಲಿ ಓಡುತ್ತಿವೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಒಟ್ಟು 6 ರೈಲುಗಳ ವೇಗ ಹೆಚ್ಚಿಸಲಾಗಿದೆ ಎಂದು ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ವೇಗ ಹೆಚ್ಚಿಸಿಕೊಂಡ ರೈಲುಗಳ ವಿವರ ಹೀಗಿದೆ.

ಜೈಪುರ - ಮೈಸೂರು ಎಕ್ಸ್‌ಪ್ರೆಸ್‌ ರೈಲು 2 ಗಂಟೆ 25 ನಿಮಿಷವಿತ್ತು. ಆದರೆ ಈಗ 2 ಗಂಟೆ 15 ನಿಮಿಷಕ್ಕೆ ಇಳಿದಿದೆ.
ವಾರಾಣಸಿ - ಮೈಸೂರು ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 15 ನಿಮಿಷಕ್ಕೆ ಇಳಿಕೆ
ರೇಣಿಗುಂಟ ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 15 ನಿಮಿಷಕ್ಕೆ ಇಳಿಕೆ
ಹೌರಾ ಮೈಸೂರು ಎಕ್ಸ್‌ಪ್ರೆಸ್‌ 2 ಗಂಟೆ 55 ನಿಮಿಷದಿಂದ 2 ಗಂಟೆ 25 ನಿಮಿಷಕ್ಕೆ ಇಳಿಕೆ
ಮೈಲಾಡುತುರೈ ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 20 ನಿಮಿಷಕ್ಕೆ ಇಳಿಕೆ
ಚಾಮರಾಜನಗರ - ತಿರುಪತಿ ಎಕ್ಸ್‌ಪ್ರೆಸ್‌ 3.20ರಿಂದ 3 ಗಂಟೆ 10 ನಿಮಿಷಕ್ಕೆ ಇಳಿಕೆ

ABOUT THE AUTHOR

...view details