ಕರ್ನಾಟಕ

karnataka

ETV Bharat / state

ಮೈಸೂರಿಗೆ ಆಗಮಿಸುತ್ತಿರುವ ಮೋದಿಗೆ ವಿಶೇಷ ಉಡುಗೊರೆ: ಸ್ವರ್ಣ ಲೇಪಿತ ಅಕ್ಷರದ ಫೋಟೋ ಗಿಫ್ಟ್ - ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ

ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ, ಮೋದಿ ಅವರನ್ನು ವಿಶಿಷ್ಟವಾಗಿ ಸ್ವಾಗತಿಸಲು ಚಿನ್ನದ ವ್ಯಾಪಾರಿಗಳು ಸ್ವರ್ಣದ ಉಡುಗೊರೆಯೊಂದಿಗೆ ಸಜ್ಜಾಗಿದ್ದಾರೆ.

ಸ್ವರ್ಣ ಲೇಪಿತ ಅಕ್ಷರದ ಫೋಟೋ
ಸ್ವರ್ಣ ಲೇಪಿತ ಅಕ್ಷರದ ಫೋಟೋ

By

Published : Jun 20, 2022, 2:20 PM IST

ಮೈಸೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ವರ್ಣಾಕ್ಷರಗಳಲ್ಲಿ ಕೆತ್ತನೆ ಮಾಡಿರುವ ವಿಶೇಷ ಉಡುಗೊರೆ ನೀಡಲು ಆಭರಣ ವ್ಯಾಪಾರಿಗಳು ಮುಂದೆ ಬಂದಿದ್ದಾರೆ. 'ಯೋಗ' ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಲಿರುವ ಮೋದಿಗೆ ನವರತ್ನ ಜ್ಯುವೆಲ್ಲರ್ಸ್ ವತಿಯಿಂದ ಸಂಸದ ಪ್ರತಾಪ್ ಸಿಂಹ ಮೂಲಕ ಈ ನೆನಪಿನ ಕಾಣಿಕೆ ನೀಡಲಾಗುವುದು.

ಸ್ವರ್ಣ ಲೇಪಿತ ಅಕ್ಷರದ ಫೋಟೋ

ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಭಾವಚಿತ್ರವನ್ನು ಬಂಗಾರದಿಂದ ಕೆತ್ತನೆ ಮಾಡಲಾಗಿದೆ. ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕವನ್ನ ಅಳವಡಿಕೆ ಮಾಡಲಾಗಿದೆ. ಥಾಯ್ಲೆಂಡ್​​​ನಲ್ಲಿ ಮಾಡಿಸಲಾಗಿರುವ ವಿಶೇಷ ಗಿಫ್ಟ್​ ಇದಾಗಿದ್ದು, ಮೈಸೂರಿಗರ ಪರವಾಗಿ ಯೋಗಕ್ಕೆ ಮೈಸೂರನ್ನ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ:ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ : ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್

ABOUT THE AUTHOR

...view details