ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಬೇಕಿದೆ ಸಹಾಯ ಹಸ್ತ.. ಸಾಧಕಿ ಪಲ್ಲವಿ ಸಂದರ್ಶನ - ಪ್ಯಾರಾ ಸ್ಪೋರ್ಟ್ಸ್ ಗೆ ಉತ್ತೇಜನ

ಬಡ ಕುಟುಂಬದಲ್ಲಿ ಜನಿಸಿ ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಪಲ್ಲವಿ ಅವರಿಗೆ ಸಹಾಯಹಸ್ತ ಬೇಕಿದೆ.

ಪಲ್ಲವಿ ಸಂದರ್ಶನ
ಪಲ್ಲವಿ ಸಂದರ್ಶನ

By

Published : Aug 3, 2023, 5:12 PM IST

Updated : Aug 3, 2023, 9:49 PM IST

ಚಿನ್ನದ ಪದಕ ಗೆದ್ದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಬೇಕಿದೆ ಸಹಾಯ ಹಸ್ತ.. ಅಂತಾರಾಷ್ಟ್ರೀಯ ಸಾಧಕಿ ಪಲ್ಲವಿ ಸಂದರ್ಶನ

ಮೈಸೂರು : ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಪಲ್ಲವಿ ಎರಡು ಚಿನ್ನದ ಪದಕ ಜಯಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಹದಾಸೆ ಇದೆ. ಆದ್ರೆ ತೀವ್ರ ಆರ್ಥಿಕ ಸಂಕಷ್ಟ ಇವರನ್ನು ಕಾಡುತ್ತಿದೆ. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ದಾನಿಗಳು ನೆರವು ನೀಡಬೇಕೆಂದು ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತವನ್ನು ಪಲ್ಲವಿ ಪ್ರತಿನಿಧಿಸಿದ್ದರು. ಇವರು ಮೈಸೂರಿನಲ್ಲಿ ತರಬೇತಿದಾರರೊಬ್ಬರ ಸಹಾಯದಿಂದ ನಾಲ್ಕು ಜನ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರ ಜೊತೆ ಸೇರಿ, ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರಿಗೆ ವಿದೇಶಗಳಲ್ಲಿ ಪಂದ್ಯವನ್ನಾಡಲು ಆರ್ಥಿಕ ಸಂಕಷ್ಟ ಎದುರಾಗಿದೆ.

ಅಂತಾರಾಷ್ಟ್ರೀಯ ಸಾಧಕಿ ಪಲ್ಲವಿ

ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಲ್ಲವಿ ಅವರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯವರು. ಕೃಷಿ ಹಿನ್ನೆಲೆಯುಳ್ಳ ಕುಟುಂಬದವರಾದ ಇವರು, ತಮ್ಮ ನಾಲ್ಕನೇ ವರ್ಷದಲ್ಲಿ ಟ್ರ್ಯಾಕ್ಟರ್ ಆಕ್ಸಿಡೆಂಟ್​ಗೆ ಒಳಗಾಗಿ ತಮ್ಮ ಸ್ಪೈರಲ್ ಇಂಜುರಿಯಾಗಿ 24 ವರ್ಷಗಳ ಕಾಲ ಮನೆಯಲ್ಲೇ ಇದ್ದರು. ನಂತರ ಪ್ಯಾರಾ ಗೇಮ್ ಇದೆ ಎಂದು ಗೊತ್ತಾಗಿ, ಕೊನೆಗೆ 2019ರಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆಯಲು ಶುರು ಮಾಡಿದರು. ಅಲ್ಲಿ ತರಬೇತಿದಾರರ ಸಹಾಯದಿಂದ ಪ್ಯಾರಾ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ನಲ್ಲಿ ತರಬೇತಿ ಪಡೆದು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ, ಸಿಂಗಲ್ಸ್​ನಲ್ಲಿ ಚಿನ್ನ, ಡಬಲ್ಸ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಇಲ್ಲಿಯವರೆಗೆ ಒಂದು ಅಂತಾರಾಷ್ಟ್ರೀಯ ಪಂದ್ಯ, ಎರಡು ರಾಷ್ಟ್ರೀಯ ಪಂದ್ಯ, ಎರಡು ಸ್ಟೇಟ್ ಪಂದ್ಯ ಆಡಿದ್ದಾರೆ.

ಅಂತಾರಾಷ್ಟ್ರೀಯ ಸಾಧಕಿ ಪಲ್ಲವಿ

ಸಹಾಯ ಬೇಕಿದೆ :ಮುಂದೆ ಸೆಪ್ಟೆಂಬರ್​ನಲ್ಲಿ ಇಂಡೋನೇಷ್ಯಾದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಅಲ್ಲಿಗೆ ಹೋಗಲು 2 ಲಕ್ಷ ರೂಪಾಯಿ ಹಣ ಬೇಕು. ಅಲ್ಲಿಗೆ ಸ್ವಂತ ಖರ್ಚಿನಲ್ಲಿ ಹೋಗಬೇಕು. ಇಂಡೋನೇಷ್ಯಾದಲ್ಲಿ ಪದಕ ಗೆದ್ದರೆ, ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ 6 ತಿಂಗಳ ಬಳಿಕ 50 ಸಾವಿರ ಸಹಾಯಧನ ಬರುತ್ತದೆ. ಇದು ಯಾವುದಕ್ಕೂ ಸಾಲುವುದಿಲ್ಲ. ತರಬೇತಿ ಪಡೆಯಬೇಕು, ತರಬೇತಿ ನಂತರ ವಿದೇಶಕ್ಕೆ ಹೋಗುವ ಖರ್ಚನ್ನು ನಾವೇ ಭರಿಸಬೇಕು. ಆದ್ದರಿಂದ ರಾಷ್ಟ್ರಕ್ಕಾಗಿ ಆಡುವ ನಮಗೆ ದಯವಿಟ್ಟು ಸರ್ಕಾರ, ಸಂಘ ಸಂಸ್ಥೆಗಳು ಜೊತೆಗೆ ದಾನಿಗಳು ಸಹಾಯ ಮಾಡಬೇಕು. ಪ್ಯಾರಾ ಸ್ಪೋರ್ಟ್ಸ್ ಗೆ ಉತ್ತೇಜನ ನೀಡಬೇಕು ಎಂದು ತಮ್ಮ ಕುಟುಂಬದ ಹಿನ್ನೆಲೆ, ತರಬೇತಿ ಪಡೆಯಲು ಆಗುತ್ತಿರುವ ಕಷ್ಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಈಟಿವಿ ಭಾರತ್ ಪ್ರತಿನಿಧಿ ಯೊಂದಿಗೆ ಪಲ್ಲವಿ ತಮ್ಮ ಸಂಕಷ್ಟದ ಕುರಿತು ಮಾತನಾಡಿದ್ದಾರೆ. ಈ ಬಡ ಕ್ರೀಡಾ ಪ್ರತಿಭೆಗೆ ಆರ್ಥಿಕ ನೆರವು ನೀಡಲು ಬಯಸುವ ಸಹೃದಯಿಗಳು ಮುಂದಾಗಬೇಕಿದೆ.

ಇದನ್ನೂ ಓದಿ:ಬೆವರಿನ ಹನಿಗಳನ್ನು ಸುರಿಸಿದರೆ ಮಾತ್ರ ನಾವು ಇತಿಹಾಸ ರಚಿಸಬಹುದು : ಪ್ಯಾರಾ ಬ್ಯಾಡ್ಮಿಂಟನ್​ ತಾರೆ ರೂಪಾದೇವಿ

Last Updated : Aug 3, 2023, 9:49 PM IST

ABOUT THE AUTHOR

...view details