ಕರ್ನಾಟಕ

karnataka

ETV Bharat / state

ದೇವರು ಕೊಟ್ಟ ಸರ್ಕಾರ ಸುಭದ್ರ: ಹೆಚ್.ಡಿ.ರೇವಣ್ಣ ಇಂಗಿತ - etv bharat

2ನೇ ಆಷಾಢ ಶುಕ್ರವಾರದ ನಿಮಿತ್ತ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆಯೇ ಆಗಮಿಸಿದ ಸಚಿವ ಹೆಚ್.ಡಿ.ರೇವಣ್ಣ ಸುಮಾರು 20 ನಿಮಿಷಗಳ ಕಾಲ ದೇವಿಯ ಗರ್ಭಗುಡಿಯಲ್ಲಿ ಕುಳಿತು ವಿಶೇಷ ಪೂಜೆ ಸಲ್ಲಿಸಿದರು.

ದೇವರು ಕೊಟ್ಟ ಸರ್ಕಾರ ಸುಭದ್ರ- ಸಚಿವ ಹೆಚ್.ಡಿ.ರೇವಣ್ಣ

By

Published : Jul 12, 2019, 5:55 PM IST

ಮೈಸೂರು: ಸಿ.ಎಂ.ಕುಮಾರಸ್ವಾಮಿ ಅವರಿಗೆ ದೇವರು ಕೊಟ್ಟ ಸರ್ಕಾರ ಇದು, ದೇವರ ಅನುಗ್ರಹ ಇರುವವರೆಗೆ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ರು.

ದೇವರು ಕೊಟ್ಟ ಸರ್ಕಾರ ಸುಭದ್ರ- ಸಚಿವ ಹೆಚ್.ಡಿ.ರೇವಣ್ಣ ವಿಶ್ವಾಸ

ಇಂದು 2ನೇ ಆಷಾಢ ಶುಕ್ರವಾರದ ನಿಮಿತ್ತ ಚಾಮುಂಡಿ ಬೆಟ್ಟಕ್ಕೆ ಬೆಳಿಗ್ಗೆಯೇ ಆಗಮಿಸಿದ ಸಚಿವ ಹೆಚ್.ಡಿ.ರೇವಣ್ಣ, ಸುಮಾರು 20 ನಿಮಿಷಗಳ ಕಾಲ ಚಾಮುಂಡಿ ಬೆಟ್ಟದಲ್ಲಿರುವ ದೇವಿಯ ಗರ್ಭಗುಡಿಯಲ್ಲಿ ಕುಳಿತು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸರ್ಕಾರ ಸುಭದ್ರವಾಗಿರಲಿ ಎಂದು ಸಂಕಲ್ಪ ಪೂಜೆ ಹಾಗೂ ಅರ್ಚನೆ ಮಾಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಕುಮಾರಸ್ವಾಮಿಗೆ ದೇವರು ಕೊಟ್ಟ ಅನುಗ್ರಹ. ಚಾಮುಂಡಿ ತಾಯಿಯ ಅನುಗ್ರಹ ಇರುವವರೆಗೂ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಇಲ್ಲದೇ ಇದ್ದರೆ ಜನರಿಗೆ ತೊಂದರೆಯೇ ಹೊರತು ಕುಮಾರಸ್ವಾಮಿಗಲ್ಲ ಎಂದರು.‌

ಸಾ.ರಾ.ಮಹೇಶ್ ಬಿಜೆಪಿ ಮುಖಂಡರ ಜೊತೆ ನಡೆಸಿರುವ ಮಾತುಕತೆ ನನಗೆ ಗೊತ್ತಿಲ್ಲ. ಈ ಸಂದರ್ಭದಲ್ಲಿ ಶಾಸಕ ಹೆಚ್.ವಿಶ್ವನಾಥ್ ವಿಚಾರ ನಾನು ಪ್ರಸ್ತಾಪ ಮಾಡುವುದಿ ಎಂದರು.

ABOUT THE AUTHOR

...view details