ಕರ್ನಾಟಕ

karnataka

ETV Bharat / state

'ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕನಿಷ್ಠ 10 ರೂಪಾಯಿ‌ ನೀಡಿ' - ಉತ್ತರಪ್ರದೇಶದ ಅಯೋಧ್ಯೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು 500 ಕೋಟಿಗೂ ಅಧಿಕ ಹಣ ಖರ್ಚಾಗಲಿದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಕನಿಷ್ಠ 10 ರೂಪಾಯಿ ನೀಡಬೇಕೆಂದು ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಸಲಹೆ ನೀಡಿದರು.

ವಿಶ್ವ ಪ್ರಸನ್ನ ಸ್ವಾಮೀಜಿ
ವಿಶ್ವ ಪ್ರಸನ್ನ ಸ್ವಾಮೀಜಿ

By

Published : Jan 6, 2021, 10:56 PM IST

ಮೈಸೂರು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದೂಗಳು ಕನಿಷ್ಠ 10 ರೂಪಾಯಿ ನೀಡಿ‌ ಎಂದು ಪೇಜಾವರ ಮಠದ ಸ್ವಾಮೀಜಿ ಹಾಗೂ ಅಯೋಧ್ಯೆ ಮಂದಿರ ಟ್ರಸ್ಟಿಯಾದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಜಿಲ್ಲಾ‌‌ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಅವರು ಅಯೋಧ್ಯೆ ಮಂದಿರ ಟ್ರಸ್ಟಿಯಾದ ಹಿನ್ನೆಲೆ‌ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು 500 ಕೋಟಿಗೂ ಅಧಿಕ ಹಣ ಖರ್ಚಾಗಲಿದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಕನಿಷ್ಠ 10 ರೂ.ನಿಂದ ಹಿಡಿದು ಗರಿಷ್ಠ ಎಷ್ಟಾದರೂ ನೀಡಿ.‌ ರಾಮಮಂದಿರ ನಿರ್ಮಾಣವಾದ ನಂತರ ದೇವಸ್ಥಾನಕ್ಕಾಗಿ ನಾನು ಏನು ಕೊಡಲಿಲ್ಲ ಎಂಬ ಭಾವನೆ ಬರಬಾರದು ಎಂದು ಸಲಹೆ ನೀಡಿದರು.

ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಅಭಿಯಾನ ಪ್ರಾರಂಭಿಸುತ್ತೇವೆ. ಎಲ್ಲರೂ ಅಭಿಯಾನಕ್ಕೆ ಕೈ ಜೋಡಿಸಿ‌ ಪೇಜಾವರ ಶ್ರೀಗಳು ಇದ್ದಾಗ ರಾಮಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದರು.

ABOUT THE AUTHOR

...view details