ಕರ್ನಾಟಕ

karnataka

ETV Bharat / state

'ನನ್ನ ಬಾಲ್ಯವಿವಾಹ ನಿಲ್ಲಿಸಿ, ಶಿಕ್ಷಣ ಕೊಡಿಸಿ': ಅಧಿಕಾರಿಗಳಿಗೆ ಪತ್ರ ಬರೆದ 16ರ ಬಾಲಕಿ - ಬಾಲ್ಯ ವಿವಾಹ

ನನ್ನ ತಾಯಿ ನನಗೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದಾರೆ. ಈ ವಿವಾಹ ನಿಲ್ಲಿಸಿ ನನ್ನ ಉನ್ನತ ವ್ಯಾಸಂಗಕ್ಕೆ ನೆರವಾಗುವಂತೆ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.

girl-wrote-a-letter-to-officials-to-stop-her-child-marriage
ಅಧಿಕಾರಿಗಳಿಗೆ ಪತ್ರ ಬರೆದ 16ರ ಬಾಲಕಿ

By

Published : Aug 19, 2021, 2:18 PM IST

ಮೈಸೂರು: ಬಾಲ್ಯವಿವಾಹ ಮಾಡಲು ತಾಯಿ ಹಾಗೂ ಕುಟುಂಬಸ್ಥರು ಮುಂದಾಗಿರುವ ಹಿನ್ನೆಲೆಯಲ್ಲಿ ಬಾಲಕಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ, ಪಿರಿಯಾಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಪತ್ರ ಬರೆದಿದ್ದಾಳೆ.

ಹಾಸನ ಮೂಲದ ಬಾಲಕಿ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಲು ಓಡಾಡುತ್ತಿದ್ದಾರೆ. ಇದನ್ನು ವಿರೋಧಿಸಿರುವ ಆಕೆ ಪಿರಿಯಾಪಟ್ಟಣದ ಸ್ನೇಹಿತೆಯ ಮನೆಗೆ ಬಂದಿದ್ದಳು.

ಅಧಿಕಾರಿಗಳಿಗೆ ಪತ್ರ ಬರೆದ ಬಾಲಕಿ

ಈ ವೇಳೆ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ‌ ಪತ್ರ‌ ಬರೆದಿದ್ದು, ತನ್ನ ಮದುವೆ ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ.‌ ಜೊತೆಗೆ ತಾನು ಎಸ್​​​ಎಸ್​​​​ಎಲ್​​​​ಸಿ ಉತ್ತೀರ್ಣಳಾಗಿದ್ದು, ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾಳೆ. ಬಾಲಕಿಯನ್ನು ಬಾಲಮಂದಿರಕ್ಕೆ‌ ಸೇರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ:'ಮಹಿಳೆಯರ ಹಿಂಸಿಸಿ, ದೇಹವನ್ನು ನಾಯಿಗೆ ಎಸೆಯುತ್ತಾರೆ': ಕಣ್ಣು ಕಳೆದುಕೊಂಡ ಮಹಿಳೆ ಹೇಳಿದ ತಾಲಿಬಾನಿಗಳ ಕ್ರೌರ್ಯದ ಕಥೆ

ABOUT THE AUTHOR

...view details