ಕರ್ನಾಟಕ

karnataka

ETV Bharat / state

ಏಪ್ರಿಲ್‌ ಫೂಲ್‌ ಎಂದು ನೆರವಿಗೆ ಬಾರದ ಗ್ರಾಮಸ್ಥರು: ವಿಷ ಸೇವಿಸಿದ್ದ ಬಾಲಕಿ ಸಾವು - ವಿಷ ಸೇವಿಸಿದ್ದ ಬಾಲಕಿ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಹೆಚ್​​.ಡಿ. ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬಾಲಕಿಯೊಬ್ಬಳು ಸಹೋದರ ಬೈದ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಳು. ಆದರೆ, ಬಾಲಕಿ ಏಪ್ರಿಲ್‌ ಫೂಲ್‌ ಮಾಡುತ್ತಿರಬೇಕೆಂದು ಭಾವಿಸಿ ಗ್ರಾಮಸ್ಥರು ಸಹಾಯಕ್ಕೆ ಬಾರೆದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಷ ಸೇವಿಸಿದ್ದ ಬಾಲಕಿ ಸಾವು
Girl committed suicide after consuming poison at Mysore

By

Published : Apr 2, 2021, 9:27 AM IST

Updated : Apr 2, 2021, 10:10 AM IST

ಮೈಸೂರು:ಬಾಲಕಿಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದರೂ ಏಪ್ರಿಲ್‌ ಫೂಲ್‌ ಎಂದು ಭಾವಿಸಿ ಸಕಾಲದಲ್ಲಿ ಗ್ರಾಮಸ್ಥರು ಸಹಾಯಕ್ಕೆ ಬಾರದೇ ಮೃತಪಟ್ಟಿರುವ ಘಟನೆ ಹೆಚ್​​.ಡಿ. ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗರಾಜು ಎಂಬುವವರ ಪುತ್ರಿ ಜ್ಯೋತಿ (17) ಸಹೋದರ ಬೈದಿದ್ದಾನೆ ಎಂಬ ಕಾರಣಕ್ಕಾಗಿ ಕ್ರಿಮಿನಾಶಕ ಸೇವಿಸಿದ್ದಳು. ಆಕೆ ಅಸ್ವಸ್ಥಳಾಗುತ್ತಿದ್ದಂತೆ ಮನೆಯವರು ಗ್ರಾಮಸ್ಥರಲ್ಲಿ ಸಹಾಯ ಯಾಚಿಸಿದ್ದರು. ಏಪ್ರಿಲ್‌ ಫೂಲ್‌ ಮಾಡುತ್ತಿರಬೇಕು ಎಂದು ಭಾವಿಸಿ ಯಾರೂ ಕೂಡ ಇವರ ಸಹಾಯಕ್ಕೆ ಬಂದಿರಲಿಲ್ಲ.

ಓದಿ: ಕೋವಿಡ್​ ಕೇಸ್​ ದಿನಕ್ಕೆ 40 ಸಾವಿರ ದಾಟಿದರೂ ಇಲ್ಲಿನ ಮಾರುಕಟ್ಟೆಯಲ್ಲಿ ಜನವೋ ಜನ!

ಕೊನೆಗೆ ಮನೆಯವರೇ ಕಷ್ಟಪಟ್ಟು ಹೆಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ.

Last Updated : Apr 2, 2021, 10:10 AM IST

ABOUT THE AUTHOR

...view details