ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಗಿರಿಜಾ ಕಲ್ಯಾಣ ಮಹೋತ್ಸವ - girija kalyana mahotsav for nanjundeshwar

ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಅದ್ಧೂರಿಯಾಗಿ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಿತು.

girija kalyana mahotsav
ನಂಜುಂಡೇಶ್ವರ ಗಿರಿಜಾ ಕಲ್ಯಾಣ ಮಹೋತ್ಸವ

By

Published : Jun 24, 2023, 11:11 AM IST

Updated : Jun 24, 2023, 2:37 PM IST

ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಗಿರಿಜಾ ಕಲ್ಯಾಣ ಮಹೋತ್ಸವ

ಮೈಸೂರು: ಗಿರಿಜಾ ಕಲ್ಯಾಣ ಮಹೋತ್ಸವದ ನಿಮಿತ್ತ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಕಾಶಿಯಾತ್ರಾ ಮಹೋತ್ಸವ ಹಾಗೂ ಧಾರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಾಲಯದ ಮುಂಭಾಗದಲ್ಲಿ ನಡೆದ ಕಾಶಿಯಾತ್ರಾ ಮೆರವಣಿಗೆಯಲ್ಲಿ ವಿವಿಧ ಬಗೆಯ ಜಾನಪದ ಕಲಾ ತಂಡಗಳು ರಥ ಬೀದಿಯಲ್ಲಿ ಸಂಚರಿಸುವ ಮೂಲಕ ವಿವಾಹ ಮಹೋತ್ಸವಕ್ಕೆ ಮೆರಗು ತಂದವು.

ದೇವಾಲಯದ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಬೆಳಗಿನಿಂದಲೇ ಕಲ್ಯಾಣೋತ್ಸವದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಾತಃಕಾಲ ಮಹಾಗಣಪತಿಗೆ ಪೂಜೆ ಸಲ್ಲಿಸಿ, ಬೆಳಗ್ಗೆ ಅನುಜ್ಞಾಪೂರ್ವಕವಾಗಿ ಮೂಲದೇವರ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ, ಕನ್ನಡಿ ಕಳಶ ಹೊತ್ತು ಕಪಿಲಾ ಸ್ನಾನಘಟ್ಟದಲ್ಲಿ ಗಂಗೆ ಪೂಜೆ, ಕಪಿಲಾ ನದಿಯಲ್ಲಿ ಮಂಗಳಸ್ನಾನ ನೆರವೇರಿಸಿ ನವಗ್ರಹ ಹೋಮ ಸೇರಿದಂತೆ ಸಕಲ ಪೂಜಾ ವಿಧಿ ವಿಧಾನವನ್ನು ಶಾಸ್ತ್ರೋಕ್ತವಾಗಿ ಕೈಗೊಳ್ಳಲಾಯಿತು. ಶುಕ್ರವಾರ ಸಂಜೆ ಕಾಶಿಯಾತ್ರೆ ಅಂಗವಾಗಿ ಶ್ರೀ ನಂಜುಂಡೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿ ಮೆರವಣಿಗೆ ದೇವಾಲಯದ ಸುತ್ತ ಸಾಗಿ ಸ್ವಸ್ಥಾನಕ್ಕೆ ಮರಳಿತು.

ಇದನ್ನೂ ಓದಿ :ನಂಜುಂಡೇಶ್ವರ , ತ್ರಿನೇಶ್ವರನ ದರ್ಶನ ಪಡೆದ ಭಕ್ತರು : ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಕುಟುಂಬ

ಶುಭ ಧನುರ್‌ ಲಗ್ನದಲ್ಲಿ ಸಂಬಂಧ ಮಾಲಾ ಅಕ್ಷ ತಾರೋಹಣ ಮುಹೂರ್ತ ನೆರವೇರಿತು. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕಲ್ಯಾಣ ಮಂಟಪದಲ್ಲಿ ಹಾಗೂ ಪಾರ್ವತಿ ಅಮ್ಮನ ಮೂರ್ತಿಯನ್ನು ವಸಂತ ಮಂಪಟದಲ್ಲಿ ಕೂರಿಸಿ ಪೂಜೆ ನೆರವೇರಿಸಿದ ಬಳಿಕ ಕಲ್ಯಾಣ ಮಂಟಪಕ್ಕೆ ಅಮ್ಮನವರ ಮೂರ್ತಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ಬಳಿಕ, ಧಾರಾ ಮಹೋತ್ಸವದೊಂದಿಗೆ ಕನ್ಯಾ ದಾನ ನೆರವೇರಿಸಿ ಕಲ್ಯಾಣ ಮಹೋತ್ಸವದ ಸೇವಾರ್ಥದಾರರು ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಇದನ್ನೂ ಓದಿ :ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚಮಹಾರಥೋತ್ಸವ ವೈಭವ - ವಿಡಿಯೋ

ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ :ನಂಜುಂಡೇಶ್ವರನಿಗೆ ಒಂದೇ ತಿಂಗಳಲ್ಲಿ 1.55 ಕೋಟಿ ರೂ ಕಾಣಿಕೆ : ಹುಂಡಿಯಲ್ಲಿ ಸಿಕ್ಕ 74 ಪಿಂಕ್​ ನೋಟುಗಳು

ಲಲಿತಾ ಸಹಸ್ರನಾಮ : ಜಯನಗರ ಮಹಿಳಾ ಸಮಾಜದ ವತಿಯಿಂದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ಅಷಾಢ ಶುಕ್ರವಾರದ ಶುಭ ದಿನವಾದ ನಿನ್ನೆ 3,000 ಮಹಿಳೆಯರಿಂದ ಲಲಿತಾ ಸಹಸ್ರನಾಮ ಕಾರ್ಯಕ್ರಮ ನೆರವೇರಿತು. ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ, ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಯನಗರದ ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸೋಮಶೇಖರ್, ನಾಗರತ್ನ ರಾಮಮೂರ್ತಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ :ಬೆಂಗಳೂರಿನಲ್ಲಿ ಲೋಕಕಲ್ಯಾಣಾರ್ಥ 3,000 ಮಹಿಳೆಯರಿಂದ ಲಲಿತಾ ಸಹಸ್ರನಾಮ ಪೂಜೆ

Last Updated : Jun 24, 2023, 2:37 PM IST

ABOUT THE AUTHOR

...view details