ಮೈಸೂರು:ಜಿಲ್ಲಾ ಪಂಚಾಯಿತಿ ಕಚೇರಿಯ ಆವರಣದಲ್ಲಿರುವ ಜನರೇಟರ್ ಶಾರ್ಟ್ ಸೆರ್ಕ್ಯೂಟ್ನಿಂದ ಸ್ಫೋಟಗೊಂಡಿದ್ದು, ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಮೈಸೂರು ಜಿಪಂ ಕಚೇರಿಯಲ್ಲಿ ಜನರೇಟರ್ ಸ್ಫೋಟ: ತಪ್ಪಿದ ಭಾರೀ ಅನಾಹುತ - ಮೈಸೂರು ಜಿ.ಪಂ. ಕಚೇರಿಯಲ್ಲಿ ಜನರೇಟರ್ ಸ್ಫೋಟ ತಪ್ಪಿದ ಭಾರಿ ಅನಾಹುತ
ಜಿಪಂ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿದ್ದ ಜನರೇಟರ್ ರೂಂನಲ್ಲಿ ಇಂದು ಬೆಳಗ್ಗೆ 9.30ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಜನರೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಕೋಣೆ ಹೊಗೆಯಿಂದ ಆವರಿಸಿಕೊಂಡಿತ್ತು.
ಮೈಸೂರು ಜಿ.ಪಂ. ಕಚೇರಿಯಲ್ಲಿ ಜನರೇಟರ್ ಸ್ಫೋಟ
ಜಿಪಂ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿದ್ದ ಜನರೇಟರ್ ರೂಂನಲ್ಲಿ ಇಂದು ಬೆಳಗ್ಗೆ 9.30ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಜನರೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಕೋಣೆಯ ತುಂಬಾ ಪಟಾಕಿ ಸಿಡಿದಂತೆ ಬೆಂಕಿ ಸಿಡಿದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸಿದ್ದಾರೆ. ಜನರೇಟರ್ ಸ್ಫೋಟದಿಂದ ದಟ್ಟ ಹೊಗೆ ಆವರಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
Last Updated : May 23, 2021, 11:09 AM IST