ಕರ್ನಾಟಕ

karnataka

ETV Bharat / state

ನಂಬಿಸಿ ಮೋಸ ಮಾಡೋ ಜಾಯಮಾನ ನಮ್ದಲ್ಲ: ಹೆಚ್​​.ವಿಶ್ವನಾಥ್​​ಗೆ ಜಿ.ಡಿ.ಹರೀಶ್​​​​ ಗೌಡ ತಿರುಗೇಟು - ಜಿ ಡಿ ಹರೀಶ್​ ಗೌಡ ಲೆಟೆಸ್ಟ್ ನ್ಯೂಸ್

ನಂಬಿಸಿ ಯಾರಿಗೂ ಮೋಸ ಮಾಡುವ ಜಾಯಮಾನ ನಮ್ಮದಲ್ಲವೆಂದು ಶಾಸಕ ಜಿ.ಟಿ‌.ದೇವೇಗೌಡರ ಪುತ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಹೆಚ್.ವಿಶ್ವನಾಥ್​​ಗೆ ತಿರುಗೇಟು ನೀಡಿದ್ದಾರೆ.

G.D. Harish gowda
ಎಂಸಿಡಿಡಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ

By

Published : Dec 10, 2019, 1:33 PM IST

ಮೈಸೂರು:ನಂಬಿಸಿ ಯಾರಿಗೂ ಮೋಸ ಮಾಡುವ ಜಾಯಮಾನ ನಮ್ಮದಲ್ಲವೆಂದು ಶಾಸಕ ಜಿ.ಟಿ‌.ದೇವೇಗೌಡರ ಪುತ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಹೆಚ್.ವಿಶ್ವನಾಥ್​​ಗೆ ತಿರುಗೇಟು ನೀಡಿದ್ದಾರೆ.

ನಂಬಿಸಿ ಮೋಸ ಮಾಡೋ ಜಾಯಮಾನ ನಮ್ಮದಲ್ಲ: ಜಿ.ಡಿ.ಹರೀಶ್ ಗೌಡ

ಹುಣಸೂರು ಉಪ ಚುನಾವಣೆ ಪರಾಜಿತ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಸೋಲಿಗೆ ಜಿಟಿಡಿ ಕಾರಣ. ನನಗೆ ದ್ರೋಹ ಮಾಡಿದ್ದಾರೆ ಎಂದಿದ್ದರು. ಈ ಸಂಬಂಧ ಹರೀಶ್ ಗೌಡ 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, ನಾವು ಯಾರಿಗೂ ನಂಬಿಸಿ ಮೋಸ ಮಾಡಿಲ್ಲ. ನಂಬಿಸಿ ಮೋಸ ಮಾಡುವ ಜಾಯಮಾನವೂ ನಮ್ಮದಲ್ಲವೆಂದು ವಿಶ್ವನಾಥ್​ಗೆ ತಿರುಗೇಟು ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ನಾವು ತಟಸ್ಥರಾಗಿರುವುದಾಗಿ ಅಂದಿನಿಂದ ಹೇಳಿದ್ದವು‌, ಹಾಗಯೇ ಇದ್ದೆವು. ಆದರೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳ ಮುಖಂಡರು ನಮ್ಮಿಂದ ಬೆಂಬಲ ಕೇಳಿದ್ದರೂ ಸಹ ಯಾವ ಪಕ್ಷಕ್ಕೂ ಬೆಂಬಲ ಸೂಚಿಸಲಿಲ್ಲ ಎಂದರು. ಇನ್ನು ನಮ್ಮ ಅಭಿಮಾನಿಗಳಿಗೆ ನಿಮ್ಮ ಇಚ್ಛೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದೆವು. ಅವರು ಯಾರಿಗೆ ಮತ ನೀಡಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.

ABOUT THE AUTHOR

...view details