ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಾಳೆ ಗೌತಮ ಪಂಚ ಮಹಾ ರಥೋತ್ಸವ ನಡೆಯಲಿದೆ. ಉತ್ಸವದಲ್ಲಿ 500 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶವಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಹೇಳಿದ್ದಾರೆ.
ನಂಜನಗೂಡಲ್ಲಿ ಗೌತಮ ಪಂಚ ಮಹಾರಥೋತ್ಸವ: 500 ಜನರಿಗೆ ಭಾಗಿಯಾಗಲು ಅವಕಾಶ - Nanjangud
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಾಳೆ ಗೌತಮ ಪಂಚ ಮಹಾರಥೋತ್ಸವ ನಡೆಯಲಿದ್ದು 500 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಸ್ಥಳೀಯರನ್ನು ಬಿಟ್ಟರೆ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತರಿಗೆ ಪ್ರವೇಶ ನಿಷೇಧವಿದೆ.
![ನಂಜನಗೂಡಲ್ಲಿ ಗೌತಮ ಪಂಚ ಮಹಾರಥೋತ್ಸವ: 500 ಜನರಿಗೆ ಭಾಗಿಯಾಗಲು ಅವಕಾಶ Gautama Pancha Maha Rathotsav](https://etvbharatimages.akamaized.net/etvbharat/prod-images/768-512-11155832-thumbnail-3x2-vish.jpg)
ಗೌತಮ ಪಂಚ ಮಾಹಾ ರಥೋತ್ಸವ
ಗೌತಮ ಪಂಚ ಮಹಾರಥೋತ್ಸವ
ರಾಜ್ಯದಲ್ಲಿ ಕೊರೊನಾ 2ನೇ ಅಲೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ 7 ಗಂಟೆವರೆಗೆ ಶುಭ ಲಗ್ನದಲ್ಲಿ ಚಿಕ್ಕ ರಥಗಳ ಉತ್ಸವ ಆಚರಿಸಲು ಜಿಲ್ಲಾಡಳಿತ ಆದೇಶ ನೀಡಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕೆಂದು ತಿಳಿಸಲಾಗಿದೆ. ಸ್ಥಳೀಯರನ್ನು ಬಿಟ್ಟರೆ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತರಿಗೆ ನಿಷೇಧ ಹೇರಲಾಗಿದೆ.
ದೇವಾಲಯದ ಒಳಗಡೆ ದೀಪಾಲಂಕಾರ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಭಕ್ತರು ಎಂದಿನಂತೆ ಸಹಕಾರ ನೀಡಬೇಕೆಂದು ದೇವಾಲಯದ ಅಧಿಕಾರಿ ಮನವಿ ಮಾಡಿದ್ದಾರೆ.