ಮೈಸೂರು:ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ. ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ನಡೆದಿದೆ. ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ, ವಿದ್ಯಾರ್ಥಿಗಳಾದ ಧನುಷ್, ಪೃಥ್ವಿ, ಗೌತಮ್ಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಬಿಇಒ ಶೋಭಾ ಭೇಟಿ ನೀಡಿ ಪರಿಶೀಲಿಸಿದರು. ಈ ಘಟನೆ ಬಗ್ಗೆ ನರಸೀಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ :ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್: ಪತಿ ಸಾವು, ಪತ್ನಿಗೆ ಗಾಯ
ರಾಯಚೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ಕೆಲವು ತಿಂಗಳ ಹಿಂದೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ಇಲ್ಲಿನ ನೇತಾಜಿ ನಗರ ಬಡಾವಣೆಯ ಈಶ್ವರ ದೇವಾಲಯದ ಸಮೀಪವಿರುವ ಖಾಜಾ ಬೀ ಎನ್ನುವವರ ಮನೆಯಲ್ಲಿ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಮನೆಯ ಬಾಗಿಲ ಬಳಿ ಇದ್ದ ಮಹಿಳೆ ಹೊರಗಡೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಖಾಜಾ ಬೀ ಎನ್ನುವವರು ಅಡುಗೆ ಅನಿಲ ಬಳಕೆ ಮಾಡಲು ಹೋದಾಗ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಪರಿಣಾಮ ಮನೆ ಕೆಲಸ ಮಾಡಲು ಬಂದ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದರು. ಸಿಲಿಂಡರ್ ಬ್ಲಾಸ್ಟ್ನಿಂದಾಗಿ ಮನೆಯ ಬಾಗಿಲು ಮುರಿದು ತುಣುಕುಗಳು ಹಾಗೂ ಮನೆಯೊಳಗೆ ಇದ್ದ ಮಹಿಳೆ ಹೊರಗಡೆ ರಸ್ತೆಯ ಮೇಲೆ ಬಂದು ಬಿದ್ದಿರುವ ಭಯಾನಕ ದೃಶ್ಯ ಬಡಾವಣೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.