ಮೈಸೂರು: ನಂಜನಗೂಡಿನ ತಗಡೂರು ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಗಡೂರು ಗ್ರಾಮದ ರಾಜು ಬಂಧಿತನಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಪುಟ್ಟಣ್ಣ ಹಾಗೂ ರವಿ ಪರಾರಿಯಾಗಿದ್ದಾರೆ.
ಏಪ್ರಿಲ್ 11ರಂದು ಸಂತ್ರಸ್ಥೆಯು ಆರೋಪಿ ರಾಜು ಎಂಬಾತನ ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದರು. ಈ ವೇಳೆ ಪ್ರತ್ಯಕ್ಷನಾದ ಆತ, ಆಕೆಯನ್ನು ದೈಹಿಕ ಸಂಪರ್ಕಕ್ಕಾಗಿ ಪುಸಲಾಯಿಸಿದ್ದಾನೆ. ತಕ್ಷಣ ನಿರಾಕರಿಸಿದ ಮಹಿಳೆಯನ್ನು ಬಲವಂತವಾಗಿ ಎಳೆದಾಡಿದ್ದಾನೆ. ಆರೋಪಿಯ ಕೃತ್ಯಕ್ಕೆ ಮಹಿಳೆ ತೀವ್ರವಾಗಿ ಪ್ರತಿರೋಧಿಸಿದ್ದರು. ಇದೇ ಸಂದರ್ಭದಲ್ಲಿ ಪುಟ್ಟಣ್ಣ ಹಾಗೂ ರವಿ ಎಂಬಿಬ್ಬರನ್ನು ಆತ ಸ್ಥಳಕ್ಕೆ ಕರೆಸಿಕೊಂಡ. ನಂತರ ಮೂವರೂ ಸೇರಿ ಮಹಿಳೆಯನ್ನು ಬಲವಂತವಾಗಿ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದಿದ್ದಳು.