ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ಇನ್ನು ನಾಲ್ಕೇ ದಿನ ಬಾಕಿ ಇದ್ದು, ಹಬ್ಬದಂದು ಪ್ರತಿಷ್ಠಾಪಿಸಲಿರುವ ಮೂರ್ತಿಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಮೈಸೂರಿನಲ್ಲಿ ಗಣಪತಿ ಮೂರ್ತಿಗಳ ಮಾರಾಟ ಬಲು ಜೋರು ಮುಂಬರುವ ಸೋಮವಾರ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲು ದೇಶದಾದ್ಯಂತ ಯುವ ಸಮೂಹವಲ್ಲದೇ ಭಕ್ತ ಸಮೂಹವು ಕಾತುರತೆಯಿಂದ ಕಾಯುತ್ತಿದೆ. ಅಂತೆಯೇ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ತಿಮ್ಮಯ್ಯಚಾರ್ ಕಲ್ಯಾಣ ಮಂಟಪದಲ್ಲಿ ಕಳೆದ 25 ವರ್ಷಗಳಿಂದ ವಿಭಿನ್ನ ಮಾದರಿ ಗಣಪತಿಗಳನ್ನು ಮಾರಾಟ ಮಾಡಲಾಗುತ್ತಿದೆ.
500 ರಿಂದ 25 ಸಾವಿರದ ವರೆಗಿನ ಬೆಲೆಯುಳ್ಳ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಸಾಂಸ್ಕೃತಿಕ ನಗರಿಯಲ್ಲಿ ಹಲವೆಡೆ ಈಗಾಗಲೇ ಮೂರ್ತಿಗಳ ವ್ಯಾಪಾರ ಚೆನ್ನಾಗಿ ಆಗುತ್ತಿದೆ.
ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ನಗರ ಪಾಲಿಕೆ ಹಾಗೂ ತಾಲೂಕು ಕಚೇರಿ ಆಡಳಿತ ಮಂಡಳಿ ನಿರ್ದೇಶನ ನೀಡಿದ್ದರೂ ಕೂಡ ಮಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.
ಮಣ್ಣಿನ ಗೌರಿ-ಗಣೇಶ ಮೂರ್ತಿಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಆದರೆ ನಮ್ಮಲ್ಲಿ ದೊರೆಯುವ ಮೂರ್ತಿಗಳು ಪಿಒಪಿ ಮೂರ್ತಿಗಳಲ್ಲ ಎಂದು ಗಣಪತಿ ಮೂರ್ತಿ ವ್ಯಾಪಾರಿ ಗುರು ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.