ಕರ್ನಾಟಕ

karnataka

ETV Bharat / state

ರಾಜ್ಯಸಭೆಗೆ ದೇವೇಗೌಡ ಸ್ಪರ್ಧಿಸಿದರೆ ಮೊದಲ ವೋಟ್​ ನಾನೇ ಮಾಡುತ್ತೇನೆ : ಜಿಟಿಡಿ - latest news for GTD

ಮೈಸೂರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ. ಟಿ. ದೇವೇಗೌಡ, ದೇಶದಲ್ಲಿ ಇಬ್ಬರೇ ಮಾಜಿ ಪ್ರಧಾನಿಗಳಿರುವುದು. ಹೀಗಾಗಿ ಅವರ ನಾಯಕತ್ವ ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ ನಾನು ದೇವೇಗೌಡರಿಗೆ ಮತ ಹಾಕುತ್ತೇವೆ ಎಂದರು.

g-t-devegowda
ಶಾಸಕ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿ

By

Published : May 27, 2020, 8:34 PM IST

Updated : May 27, 2020, 11:39 PM IST

ಮೈಸೂರು :ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದರೆ, ನಾನೇ ಅವರಿಗೆ ಮೊದಲ ವೋಟ್​ ಮಾಡುತ್ತೇನೆ ಎಂದು ಶಾಸಕ ಜಿ. ಟಿ. ದೇವೇಗೌಡ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಇಬ್ಬರೇ ಮಾಜಿ ಪ್ರಧಾನಿಗಳು ಇದ್ದಾರೆ. ಹೀಗಾಗಿ ಅವರ ನಾಯಕತ್ವ ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ ನಾನು ದೇವೇಗೌಡರಿಗೆ ಮತ ನೀಡುತ್ತೇನೆ ಎಂದರು.

ಕೊರೊನಾ ಸೋಂಕು ಹರಡುವ ಭೀತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗದೇ ಅವಧಿ ಮುಗಿದಿರುವ ಗ್ರಾ.ಪಂ.ಗಳಿಗೆ ಸರ್ಕಾರ, ಹೊರಗಿನವರ ನಾಮ ನಿರ್ದೇಶನ ಮಾಡುವ ನಡೆ ಸರಿಯಲ್ಲ. ಗ್ರಾ.ಪಂ.ಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದಿದ್ದಾಗ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳನ್ನು ನೇಮಿಸಿರುವ ಉದಾಹರಣೆಗಳಿವೆ. ಚುನಾಯಿತ ಸಂಸ್ಥೆಗಳಿಗೆ ಹೊರಗಿನವರನ್ನು ನಾಮ ನಿರ್ದೇಶನ ಮಾಡಿ ಆಡಳಿತ ಸಮಿತಿ ರಚಿಸಿದ ಉದಾಹರಣೆಗಳಿಲ್ಲ. ಸಂವಿಧಾನದ ಆಶಯದಂತೆ ಜನಪ್ರತಿನಿಧಿಗಳು ಜನರಿಂದ ನೇರವಾಗಿ ಆಯ್ಕೆಯಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದು ಸೂಕ್ತ ಎಂದರು.

ಶಾಸಕ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿ

ಒಂದು ವೇಳೆ ಗ್ರಾ.ಪಂ.ಗಳಲ್ಲಿ ಆಡಳಿತ ಮಂಡಳಿ ರಚಿಸಿದಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಹಿನ್ನಡೆಯಾಗಲಿದೆ. ಅರ್ಹ ಸದಸ್ಯರ ಆಯ್ಕೆಯಾಗುವ ಬದಲು ಉಳ್ಳವರು ಅಥವಾ ಬಲಿಷ್ಠರ ಆಡಳಿತ ಮಂಡಳಿ ಸದಸ್ಯರಾಗುವ ಅವಕಾಶವಿದೆ. ಮುಂದಿನ ಚುನಾವಣೆಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಕೇವಲ ಪಕ್ಷದ ಪಂಚಾಯಿತಿ ಆಗಬಾರದು. ಸರ್ವರ ಪಂಚಾಯಿತಿ ಆಗಬೇಕು. ಸರ್ಕಾರ ಕೂಡಲೇ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. ಈ ವಿಚಾರದಲ್ಲಿ ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಹೇಳಿದ್ದೇನೆ. ಬೇರೆ ಯಾವ ಉದ್ದೇಶದಿಂದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ. ಒಂದು ವೇಳೆ ಸರ್ಕಾರ ಹೊರಗಿನವರನ್ನು ನಾಮ ನಿರ್ದೇಶನ ಮಾಡಿದರೆ ತಳ ಮಟ್ಟದಿಂದ ಹೋರಾಟ ನಡೆಸುವುದಾಗಿ ಎಂದರು.

Last Updated : May 27, 2020, 11:39 PM IST

ABOUT THE AUTHOR

...view details