ಮೈಸೂರು: ಮತದಾನಕ್ಕೆ ನಾಲ್ಕೈದು ದಿನಗಳು ಇರುವಾಗ ಸಿ.ಪಿ.ಯೋಗೇಶ್ವರ್ ಅವರು, ಹುಣಸೂರು ತಾಲೂಕಿನಲ್ಲಿ ಯಾವ ಹೆಚ್.ಡಿ.ದೇವೇಗೌಡ, ಯಾವ ಜಿ.ಟಿ.ದೇವೇಗೌಡ ಎಂದು ಮಾತನಾಡಿದ್ರು, ಹೀಗಾಗಿ ಅಷ್ಟು ದಿವಸ ತಟಸ್ಥವಾಗಿದ್ದ ನನ್ನ ಮಗ ಹರೀಶ್ ಗೌಡ ಆತನ ಶಕ್ತಿ ತೋರಿಸಿದ್ದಾನೆ ಎಂದು ಜಿ.ಟಿ. ದೇವೇಗೌಡ, ಬಿಜೆಪಿ ಮುಖಂಡ ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್. ವಿಶ್ವನಾಥ್ ಸೋಲಿಗೆ ಕಾರಣ ತಿಳಿಸಿದ್ದಾರೆ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಾಗ ಉಪ ಚುನಾವಣೆ ಘೋಷಣೆ ಮುನ್ನವೇ ಹೇಳಿದ್ದೆ, ಅಲ್ಲಿ ಶೆಟ್ಟರು(ಹೆಚ್.ಪಿ.ಮಂಜುನಾಥ್) ಗೆಲ್ತಾರೆ ಅಂತ... ಈ ಮಾತನ್ನು ವಿಶ್ವನಾಥ್ ಅವರಿಗೂ ಹೇಳಿದ್ದೆ, ಉಪ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಹೇಳಿ ಅವರು ಮತ್ತೆ ಸ್ಪರ್ಧೆ ಮಾಡಿದ್ರು. ಆಗಲು ಯಾರಿಗೂ ಬೆಂಬಲ ನೀಡುವುದಿಲ್ಲ ತಟಸ್ಥವಾಗಿರುತ್ತೀನಿ ಎಂದು ವಿಶ್ವನಾಥ್ ಅವರಿಗೆ ಹೇಳಿದ್ದೆ. ಇದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.