ಮೈಸೂರು: ಎಂಸಿಡಿಸಿಸಿ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಅವರ ಮಗಳು ಸಾವಿಗೀಡಾಗಿದ್ದು, ತಂದೆಯು ಮಗಳ ಮೃತದೇಹ ತಬ್ಬಿ ಗೋಳಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಂಚಲಿ ನೀರುತಂದಿದೆ. ಮೈಸೂರಿನ ಗುಂಗ್ರಾಲ್ ಛತ್ರದ ತೋಟದ ಮನೆಯಲ್ಲಿ ಹರೀಶ್ ಗೌಡ ಅವರು ತಮ್ಮ ಮಗಳಾದ ಮೂವರು ವರ್ಷದ ಕಂದಮ್ಮ ಗೌರಿಯ ಅಂತ್ಯಕ್ರಿಯೆ ನೆರವೇರಿಸಿದರು. ಮಗಳಿಗೆ ಅಂತಿಮ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮಗಳಿಗೆ ಅಂತಿಮ ವಿದಾಯ ಹೇಳಿದ ಜಿಟಿಡಿ ಪುತ್ರ: ಅಂತ್ಯಕ್ರಿಯೆ ವೇಳೆ ಆಕ್ರಂದನ - ಜಿ ಟಿ ದೇವೇಗೌಡ ಮೊಮ್ಮಗಳ ಅಂತ್ಯಕ್ರಿಯೆ
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಾಲಕಿ ಗೌರಿ ಶನಿವಾರ ರಾತ್ರಿ ಇಹಲೋಹ ತ್ಯಜಿಸಿದ್ದಳು.
![ಮಗಳಿಗೆ ಅಂತಿಮ ವಿದಾಯ ಹೇಳಿದ ಜಿಟಿಡಿ ಪುತ್ರ: ಅಂತ್ಯಕ್ರಿಯೆ ವೇಳೆ ಆಕ್ರಂದನ ಎಂಸಿಡಿಸಿಸಿ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಅವರ ಮಗಳ ಸಾವು](https://etvbharatimages.akamaized.net/etvbharat/prod-images/768-512-15293594-thumbnail-3x2-nin.jpg)
ಎಂಸಿಡಿಸಿಸಿ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಅವರ ಮಗಳ ಸಾವು
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಗೌರಿ ಶನಿವಾರ ರಾತ್ರಿ ಇಹಲೋಹ ತ್ಯಜಿಸಿದ್ದಳು. ಇಂದು ಸಂಪ್ರದಾಯದಂತೆ ಗೌರಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಅವರ ಕುಟುಂಬಸ್ಥರು, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಗಳಿಗೆ ಅಂತಿಮ ವಿದಾಯ ಹೇಳಿದ ಜಿಟಿಡಿ ಪುತ್ರ
ಇದನ್ನೂ ಓದಿ : ಕಲ್ಲಿದ್ದಲು ಸಾಗಿಸುವ ಬೆಲ್ಟ್ಗೆ ಸಿಲುಕಿ ಕಾರ್ಮಿಕ ಸಾವು
Last Updated : May 15, 2022, 8:06 PM IST