ಮೈಸೂರು: ಪೋಷಕರ ಸಮ್ಮುಖದಲ್ಲಿಯೇ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಘಟನೆ ಕೆ.ಆರ್.ನಗರದಲ್ಲಿ ನಡೆದಿದೆ.
ಪೋಷಕರ ಸಮ್ಮುಖದಲ್ಲೇ ಕೊರೊನಾದಿಂದ ಮೃತಪಟ್ಟವನ ಅಂತ್ಯಕ್ರಿಯೆ - ಪೋಷಕರ ಸಮ್ಮುಖದಲ್ಲಿ ಕೊರೊನಾದಿಂದ ಮೃತಪಟ್ಟವನ ಅಂತ್ಯಕ್ರಿಯೆ
ಭೇರ್ಯ ಗ್ರಾಮದ ಯುವಕನೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ. ಈ ಹಿನ್ನೆಲೆ ಪೋಷಕರ ಸಮ್ಮುಖದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ತಾಲೂಕಿನ ಭೇರ್ಯ ಗ್ರಾಮದ ಯುವಕನೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮೃತನ ಗ್ರಾಮದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಪಿಪಿಇ ಕಿಟ್ ಹಾಕಿಕೊಂಡಿದ್ದ ಸಿಬ್ಬಂದಿಯೇ ಮೃತದೇಹವನ್ನು ಆ್ಯಂಬುಲೆನ್ಸ್‌ನಿಂದ ತೆಗೆದುಕೊಂಡು ಬಂದಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಮೃತ ಯುವಕನ ಸಂಬಂಧಿಕ ವೃದ್ಧರೊಬ್ಬರ ಸಹಾಯ ಪಡೆಯಲಾಗಿದೆ.
ಆದರೆ ಆ ವೃದ್ಧ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಮೃತದೇಹವನ್ನು ಗುಂಡಿಯ ಒಳಗೆ ಇಳಿಸಲು ಸಹಾಯ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಆ ವೃದ್ಧನಿಗೂ ಸೋಂಕು ತಗುಲಿ ಅನಾಹುತವಾದರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.