ಮೈಸೂರು: ಪ್ರತಿಯೊಬ್ಬ ಹಿಂದೂಗಳ ಮನೆಯಿಂದ ನಿಧಿ ಸಂಗ್ರಹ ಮಾಡಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶ್ರೀ ರಾಮ ಮಂದಿರ ನಿಧಿ ಸಂಗ್ರಹಣ ಕರ್ನಾಟಕ ರಾಜ್ಯದ ಮುಖ್ಯಸ್ಥ ಮಾ. ವೆಂಕಟರಾಮು ಈ ಟಿವಿ ಭಾರತಗೆ ತಿಳಿಸಿದ್ದಾರೆ.
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಇಂದು ನಟ ಅಭಿಷೇಕ್ ಅಂಬರೀಶ್ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಣದ ಕಾರ್ಯಕ್ರಮಕ್ಕೆ 5 ಸಾವಿರ ದೇಣಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಿಧಿ ಸಂಗ್ರಹಣ ಸಮಿತಿಯ ಕರ್ನಾಟಕದ ಅಧ್ಯಕ್ಷರಾದ ಮಾ. ವೆಂಕಟರಾಮು ಈ ಟಿವಿ ಭಾರತ ಜೊತೆ ಮಾತನಾಡಿ, ಈ ನಿಧಿಯನ್ನು ಪ್ರತಿ ಮನೆ ಮನೆಗೂ ಹೋಗಿ ಸಂಗ್ರಹ ಮಾಡುತ್ತೇವೆ. ಜನರ ಭಾವನೆ ಹಾಗೂ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ರಸ್ತೆಯಲ್ಲಿ, ಸಮಾರಂಭಗಳಲ್ಲಿ, ಸರ್ಕಾರ ಹಾಗೂ ವಿದೇಶಗಳಿಂದ ನಿಧಿಯನ್ನು ಸಂಗ್ರಹ ಮಾಡುವುದಿಲ್ಲ. ಕೇವಲ ಭಾರತೀಯ ಹಿಂದೂಗಳಿಂದ 10,100 ಹಾಗೂ ಸಾವಿರ ರೂಪಾಯಿ ನಿಧಿ ಸಂಗ್ರಹ ಮಾಡುತ್ತೇವೆ. ಅದಕ್ಕಿಂತ ಹೆಚ್ಚು ನೀಡಿದವರಿಗೆ ರಶೀದಿ ನೀಡುತ್ತೆವೆ. 2024 ರ ಸಮಯಕ್ಕೆ ಶ್ರೀ ರಾಮ ಮಂದಿರ ನಿರ್ಮಾಣ ಪೂರ್ಣವಾಗಲಿದೆ. ದೇಶದಲ್ಲಿ ಜನವರಿ 15 ರಿಂದ ಫೆಬ್ರವರಿ 5 ರ ವರೆಗೆ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ ಎಂದು ಮಾ. ವೆಂಕಟರಾಮು ತಿಳಿಸಿದರು.
ಓದಿ : ಸಿನಿಮಾಗಳು ಚಿತ್ರ ಮಂದಿರದಲ್ಲೇ ರಿಲೀಸ್ ಆದರೆ ಉತ್ತಮ: ಅಭಿಷೇಕ್ ಅಂಬರೀಶ್