ಮೈಸೂರು: ತಮ್ಮ ಗೆಳೆಯನ ಹತ್ಯೆಗೆ ಸ್ನೇಹಿತರೇ ಪ್ರತೀಕಾರ ತೆಗೆದುಕೊಂಡಿದ್ದು, ಕೊಲೆ ಮಾಡಿದ ಯುವಕನ ಸಹೋದರನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.
ನಗರದ ಗಾಯತ್ರಿಪುರಂನ ಚರ್ಚ್ ಮೈದಾನದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕ್ಯಾತಮಾರನಹಳ್ಳಿಯ ನಿವಾಸಿ ಅಭಿಷೇಕ್(22) ಮೃತ ಯುವಕ. ಈತನನ್ನು ಅದೇ ಬಡಾವಣೆಯ ನಿವಾಸಿಗಳಾದ ಮಹೇಂದ್ರ ಮತ್ತು ಇರ್ಫಾನ್ ಕೊಲೆ ಮಾಡಿದ್ದಾರೆ. ಕಳೆದ ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಎಂಬಾತನ ಕೊಲೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು, ಕೊಲೆ ಮಾಡಿದ ಕಿರಣ್ ಮತ್ತು ಮಧು ಎಂಬಾತನನ್ನು ಕಾರ್ಯಾಚರಣೆ ನಡೆಸಿ ಬುಧವಾರವಷ್ಟೇ ಬಂಧಿಸಿ ಜೈಲಿಗಟ್ಟಿದ್ದರು.