ಕರ್ನಾಟಕ

karnataka

ETV Bharat / state

ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ಇನ್ನಿಲ್ಲ.. - Srikantaiah passed away

ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಶ್ರೀಕಂಠಯ್ಯನವರು (96) ಶುಕ್ರವಾರ ನಿಧನರಾಗಿದ್ದಾರೆ.

freedom fighter Srikantaiah is no more
ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ನಿಧನ

By

Published : Dec 3, 2022, 8:01 AM IST

ಮೈಸೂರು: ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಕಂಠಯ್ಯನವರು (96) ಶುಕ್ರವಾರ ನಿಧನರಾಗಿದ್ದಾರೆ. ವಿಷಯ ತಿಳಿದ ಕೂಡಲೇ ನಂಜನಗೂಡು ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ನಿಧನ

ಬಳಿಕ ಮಾತನಾಡಿ ಧ್ರುವನಾರಾಯಣ್, ಶ್ರೀಕಂಠಯ್ಯನವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. 96 ವರ್ಷಗಳಲ್ಲಿ ಅವರು ಜನಪರವಾಗಿದ್ದರು. ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪುಣ್ಯ ಪುರುಷರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ಕಂಬನಿ ಮಿಡಿದರು.

ಇದನ್ನೂ ಓದಿ:ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ

ABOUT THE AUTHOR

...view details