ಕರ್ನಾಟಕ

karnataka

ETV Bharat / state

ಫ್ರಿ ಕಾಶ್ಮೀರ ಬೋರ್ಡ್​: ಜಾಮೀನು ದೊರಕಿಸಿಕೊಟ್ಟ ವಕೀಲರಿಗೆ ದ್ವಾರಕನಾಥ್ ಅಭಿನಂದನೆ - ವಕೀಲರಿಗೆ ಅಭಿನಂದನೆ ಸಲ್ಲಿಸಿದ ಸಿ.ಎಸ್.ದ್ವಾರಕನಾಥ್

ಫ್ರೀ ಕಾಶ್ಮೀರ ಬೋರ್ಡ್​ ಪ್ರದರ್ಶಿಸಿದ್ದ ಆರೋಪಿ ನಳಿನಿಗೆ ಎರಡನೇ ಅಡಿಷನಲ್ ಜಿಲ್ಲಾ ಸೆಷನ್ ನ್ಯಾಯಾಲಯವು 8 ಷರತ್ತುಗಳನ್ನು ವಿಧಿಸಿ ಷರತ್ತು ಬದ್ಧ ಜಾಮೀನು ನೀಡಿದ ಹಿನ್ನೆಲೆ ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ವಕೀಲರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ
ಅಭಿನಂದನೆ

By

Published : Jan 27, 2020, 9:41 PM IST

ಮೈಸೂರು: ಫ್ರಿ ಕಾಶ್ಮೀರ ಪ್ರಕರಣದ ಯುವತಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಅವರು ವಕೀಲರಿಗೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನ ನಳಿನಿ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ಈ ಕೇಸಿನಲ್ಲಿ‌ ನನ್ನೊಂದಿಗೆ ತೊಡಗಿಸಿಕೊಂಡ ಎಲ್ಲಾ ಜನಪರ ವಕೀಲರಿಗೂ, ವಾದ ಮಂಡಿಸಿದ ವಕೀಲ‌ ಜಗದೀಶ್ ರಿಗೂ ಕೃತಜ್ಞತೆಗಳು' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಕೀಲರಿಗೆ ಅಭಿನಂದನೆ ಸಲ್ಲಿಸಿದ ಸಿ.ಎಸ್.ದ್ವಾರಕನಾಥ್

ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ 'ಫ್ರಿ ಕಾಶ್ಮೀರ ' ಬೋರ್ಡ್​ ಹಿಡಿದ ನಳಿನಿ ಬಾಲಕುಮಾರ್ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿ.ಎಸ್.ದ್ವಾರಕನಾಥ್ ಅವರು, ನಮ್ಮ ತಂಡ ಯುವತಿಯ ಪರವಾಗಿ ವಾದ ಮಂಡಿಸಲಿದೆ ಎಂದು ಹೇಳಿದ್ದರು. ಅದರಂತೆ ಅವರ ವಕೀಲರು ಮೈಸೂರಿಗೆ ಬಂದಾಗ ಮೈಸೂರಿನ ಕೆಲ ವಕೀಲರು ವಿರೋಧ ವ್ಯಕ್ತಪಡಿಸಿದರು. ಇದರ ನಡುವೆಜಗದೀಶ್ ನೇತೃತ್ವದ ವಕೀಲರ ತಂಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿಸಿದೆ.

ABOUT THE AUTHOR

...view details