ಕರ್ನಾಟಕ

karnataka

ETV Bharat / state

ಫ್ರಿ‌ ಕಾಶ್ಮೀರ್​ ಪೋಸ್ಟರ್​ ಪ್ರಕರಣ: ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಮೈಸೂರು ಕೋರ್ಟ್​

ಫ್ರೀ ಕಾಶ್ಮೀರ್ ಪೋಸ್ಟರ್​ ಪ್ರದರ್ಶನ​ ಪ್ರಕರಣದ ಜಾಮೀನು ಅರ್ಜಿ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

By

Published : Jan 24, 2020, 9:29 PM IST

ನ್ಯಾಯಾಲಯ
ನ್ಯಾಯಾಲಯ

ಮೈಸೂರು:ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ‌ ತೀರ್ಪನ್ನು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

ಮೈಸೂರಲ್ಲಿ 'ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದ ಯುವತಿ: ಪೊಲೀಸರಿಗೆ ಸಿಕ್ಕಿತು ಸುಳಿವು

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನವರಿ 8ರಂದು ಸಂಜೆ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಡೆಸಿದ್ದ ಪ್ರತಿಭಟನೆ ವೇಳೆ, ಫ್ರೀ ಕಾಶ್ಮೀರ್​ ಪೋಸ್ಟರ್​ ಪ್ರದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಸಿ.ಎಸ್. ದ್ವಾರಕನಾಥ್ ತಂಡದ ಸದಸ್ಯರು ಮೈಸೂರಿನಲ್ಲಿ ನಳಿನಿ ಪರವಾಗಿ ವಾದ ಮಂಡಿಸಲು ಆಗಮಿಸಿದ್ದರು. ನಳಿನಿ ಪ್ರಕರಣದ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಜ.27ವರೆಗೆ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.

ನಳಿನಿ ಪರ ವಕೀಲ ಮಂಜು ಅವರು ವಿಚಾರಣೆ ಕುರಿತು ವಿವರಣೆ ನೀಡಿದರು

'ಫ್ರೀ ಕಾಶ್ಮೀರ್'​ ಪೋಸ್ಟರ್​ ಪ್ರದರ್ಶಿಸಿದ ಪ್ರಕರಣ: ವಿಚಾರಣೆಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ

ಇಂದು ಮಧ್ಯಾಹ್ನ 3ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಸತತ ಎರಡು ಗಂಟೆಗಳ ಕಾಲ ವಾದ- ಪ್ರತಿವಾದ‌ವನ್ನು ವಕೀಲರು ಮಂಡಿಸಿದರು.

ABOUT THE AUTHOR

...view details