ಮೈಸೂರು:ಲೋನ್ ಕೊಡಿಸುತ್ತೇನೆ ಎಂದು ಹೇಳಿದ ಮಹಿಳೆ ನನಗೆ ಪರಿಚಯವೇ ಇರಲಿಲ್ಲ ಎಂದು 'ರಾಬರ್ಟ್' ಚಿತ್ರ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ಎನ್.ಆರ್.ಎಸಿಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ತಿಂಗಳ ಹಿಂದೆ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಲೋನ್ ತೆಗೆದುಕೊಳ್ಳುತ್ತಿದ್ದೀರಾ?, ಯಾರಿಗಾದರೂ ಶ್ಯೂರಿಟಿ ಹಾಕಿದ್ದೀರಾ? ಅಂತಾ ಕೇಳಿದ್ರು. ನನಗೆ ಅನುಮಾನ ಬಂದು ಕಳೆದ ತಿಂಗಳು ನನ್ನ ಕಚೇರಿ ವ್ಯಾಪ್ತಿಯಲ್ಲಿರುವ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಎನ್.ಸಿ.ಆರ್ ಪಡೆದಿದ್ದೇನೆ ಎಂದರು.
ದರ್ಶನ್, ಹರ್ಷ ಹಾಗೂ ನನ್ನ ಸಹಿಗಳು ನಕಲಿಯಾಗಿವೆ. ಆಸ್ತಿ ಪತ್ರಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಮೈಸೂರಿನಲ್ಲಿ ದೂರು ಕೊಟ್ಟಿದ್ದೇನೆ. ಈ ವಿಚಾರವನ್ನು ಆರಂಭದಲ್ಲೇ ದರ್ಶನ್ ಅವರ ಗಮನಕ್ಕೂ ತಂದಿದ್ದೆ. ಮೈಸೂರು ಅಸ್ತಿ ಪತ್ರಗಳು ನಕಲಿ ಆಗಿದ್ದರಿಂದ ಇಲ್ಲಿ ದೂರು ಕೊಟ್ಟರೆ ಒಳ್ಳೆಯದು ಅಂತಾ ದರ್ಶನ್ ಅವರೇ ಸಲಹೆ ಕೊಟ್ಟರು.