ಮೈಸೂರು: ಸೂಪರ್ ಮಾರ್ಕೆಟ್ ಅಂಗಡಿಗೆ ನಾಗಾಲ್ಯಾಂಡ್ ಯುವಕರನ್ನು ಒಳ ಪ್ರವೇಶ ಮಾಡಲು ಬಿಡದೇ ತಡೆ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ನೌಕರರನ್ನು ಬಂಧಿಸಲಾಗಿದೆ.
ನಾಗಾಲ್ಯಾಂಡ್ ಯುವಕರನ್ನು ಸೂಪರ್ ಮಾರ್ಕೆಟ್ಗೆ ಬಿಡದ ನೌಕರರ ಬಂಧನ - super market Four employees arrested
ನಾಗಾಲ್ಯಾಂಡ್ ಯುವಕರನ್ನು ಸೂಪರ್ ಮಾರ್ಕೆಟ್ ಅಂಗಡಿಗೆ ಪ್ರವೇಶ ಮಾಡಲು ಬಿಡದ ಔಟ್ಲೆಟ್ ನಾಲ್ವರು ನೌಕರರನ್ನು ಬಂಧಿಸಲಾಗಿದೆ.
ಸೂಪರ್ ಮಾರ್ಕೆಟ್
ಶನಿವಾರ ಸಂಜೆ ನಗರದ ಚಾಮುಂಡಿಪುರಂನಲ್ಲಿರುವ ಮೋರ್ ಸೂಪರ್ ಮಾರ್ಕೆಟ್ಗೆ ಆಹಾರ ಪದಾರ್ಥಗಳನ್ನು ಖರೀದಿಸಲು ಬಂದ ಇಬ್ಬರು ನಾಗಾಲ್ಯಾಂಡ್ ಯುವಕರನ್ನು ಈ ಔಟ್ಲೆಟ್ ನ ನೌಕರರಾದ ರೇವಣ್ಣ, ಮಂಜು , ನವೀನ್ ಹಾಗೂ ಅವಿನಾಶ್ ಎಂಬುವವರು ಈ ಯುವಕರನ್ನು ಸೂಪರ್ ಮಾರ್ಕೆಟ್ ಒಳಗಡೆ ಪ್ರವೇಶಸಿದಂತೆ ತಡೆದು, ಜನಾಂಗೀಯ ತಾರತಮ್ಯ ಮಾಡಿ ಕಳುಹಿಸಿದ್ದರು.
ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಔಟ್ಲೆಟ್ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ನಡೆದಿರುವುದು ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.