ಕರ್ನಾಟಕ

karnataka

ವಸತಿ ಶಾಲೆಯ ಶಿಕ್ಷಕಿ ಹತ್ಯೆ ಪ್ರಕರಣ: ನಗರಸಭೆಯ ಮಹಿಳಾ ಸದಸ್ಯೆ ಸೇರಿ ನಾಲ್ವರ ಬಂಧನ

By

Published : Aug 4, 2022, 9:33 AM IST

Updated : Aug 4, 2022, 11:29 AM IST

ನಂಜನಗೂಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕಿ ಸುಲೋಚನಾ ಹತ್ಯೆ ಗೆ ಸಂಬಂಧಿಸಿದಂತೆ ನಗರಸಭೆ ಸದಸ್ಯೆ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

four-arrested-in-teacher-murder-case
ವಸತಿ ಶಾಲೆಯ ಶಿಕ್ಷಕಿ ಹತ್ಯೆ ಪ್ರಕರಣ: ನಗರ ಸಭೆಯ ಮಹಿಳಾ ಸದಸ್ಯೆ ಸೇರಿ ನಾಲ್ವರ ಬಂಧನ

ಮೈಸೂರು : ಕಳೆದ 5 ತಿಂಗಳ ಹಿಂದೆ ನಡೆದ ವಸತಿ ಶಾಲೆಯ ಶಿಕ್ಷಕಿ ಹತ್ಯೆ ಪ್ರಕರಣ ಸಂಬಂಧ ನಂಜನಗೂಡು ನಗರಸಭೆ ಮಹಿಳಾ ಸದಸ್ಯೆ ಸೇರಿದಂತೆ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡಿನ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸುಲೋಚನಾ(45 ) ಅವರನ್ನು ಕಳೆದ ಮಾರ್ಚ್ 9 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ 5 ತಿಂಗಳ ನಂತರ ಬಿಜೆಪಿಯ ನಂಜನಗೂಡು ನಗರಸಭೆಯ ಮಹಿಳಾ ಸದಸ್ಯೆ ಗಾಯತ್ರಿ ಮುರುಗೇಶ್, ಆಕೆಯ ಸಂಬಂಧಿಕರಾದ ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಬಂಧದ ಹಿನ್ನಲೆ ಶಿಕ್ಷಕಿ ಕೊಲೆ : ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೃತ ಸುಲೋಚನಾರ ಗಂಡ ಕಳೆದ 4 ವರ್ಷಗಳ ಹಿಂದೆ ಮೃತಪಟ್ಟಿದ್ದು, ಈಕೆಯೊಂದಿಗೆ ಬಂಧಿತ ಗಾಯತ್ರಿ ಅವರ ಗಂಡ ಮುರುಗೇಶ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹಲವು ಬಾರಿ ಮನೆಯಲ್ಲಿ ಗಂಡನ ಜೊತೆ ಜಗಳವಾಡಿದ್ದ ಗಾಯತ್ರಿ, ಕೊನೆಗೆ ಶಿಕ್ಷಕಿಯನ್ನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

ಅಕ್ರಮ ಸಂಬಂಧ ಹೊಂದಿದ್ದ ಮುರುಗೇಶ್, ಶ್ರೀಕಂಠೇಶ್ವರ ದೇವಾಲಯದಲ್ಲಿ ಡಿ ಗ್ರೂಪ್ ನೌಕರನಾಗಿದ್ದಾನೆ. ರಾಜಕೀಯದಲ್ಲಿ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದ. ಈತನ ಹೆಂಡತಿ ಗಾಯತ್ರಿಯನ್ನು ಕಳೆದ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಓದಿ :ಕ್ಲರ್ಕ್​​ ಮನೆಯಲ್ಲಿ 80 ಲಕ್ಷ ರೂ ನಗದು, ಅಪಾರ ಚಿನ್ನಾಭರಣ ಪತ್ತೆ: ವಿಡಿಯೋ

Last Updated : Aug 4, 2022, 11:29 AM IST

ABOUT THE AUTHOR

...view details