ಕರ್ನಾಟಕ

karnataka

ETV Bharat / state

ರೈತರ ಓಡಾಟಕ್ಕೆ ಗ್ರೀನ್ ಕಾರ್ಡ್​ ನೀಡಲಾಗುವುದು: ಸಚಿವ ಬಿ.ಸಿ.ಪಾಟೀಲ್​

ಜಿಲ್ಲೆಯಲ್ಲಿ ಈಗಾಗಲೇ ಮಳೆ ಬಿದ್ದಿದ್ದು, ಇಲ್ಲಿ ರೈತರಿಗೆ ಗೊಬ್ಬರ, ಬೀಜ ಸಿಗುತ್ತಿಲ್ಲ ಎಂಬ ಬಗ್ಗೆ ರೈತರು ಗಮನಕ್ಕೆ ತಂದಿದ್ದಾರೆ. ಜೊತೆಗೆ ಬೇರೆ ಕಡೆ ಓಡಾಡಲು ರೈತರ ವಾಹನಗಳನ್ನು ಬಿಡುತ್ತಿಲ್ಲ, ತೊಂದರೆ ಪಡುತ್ತಿದ್ದಾರೆ ಎಂಬ ಬಗ್ಗೆ ಸಹ ಚರ್ಚೆಯಾಗಿದ್ದು, ಕೃಷಿ ಚಟುವಟಿಕೆಗಳು ನಿಲ್ಲದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ತಿಳಿಸಿದ್ದೇನೆ ಅಂತ ಕೃಷಿ ಸಚಿವ ಬಿ.ಸಿ.ಪಾಟೀಲ್​ ಹೇಳಿದ್ದಾರೆ.

formers will get Green card for travelling - BC Patil
ಲಾಕ್​ಡೌನ್​​​​​: ರೈತರ ಓಡಾಟಕ್ಕೆ ಗ್ರೀನ್ ಕಾರ್ಡ್​ ನೀಡಲಾಗುವುದು-ಸಚಿವ ಬಿ.ಸಿ.ಪಾಟೀಲ್​

By

Published : Apr 11, 2020, 5:17 PM IST

ಮೈಸೂರು:ರೈತರ ಓಡಾಡಟಕ್ಕೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಲು ಅವರಿಗೆ ಗ್ರೀನ್ ಪಾಸ್ ವಿತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್ ಹೇಳಿದ್ದಾರೆ.

ರೈತರ ಓಡಾಟಕ್ಕೆ ಗ್ರೀನ್ ಕಾರ್ಡ್​ ನೀಡಲಾಗುವುದು: ಸಚಿವ ಬಿ.ಸಿ.ಪಾಟೀಲ್​

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮಳೆ ಬಿದ್ದಿದ್ದು, ಇಲ್ಲಿ ರೈತರಿಗೆ ಗೊಬ್ಬರ, ಬೀಜ ಸಿಗುತ್ತಿಲ್ಲ ಎಂಬ ಬಗ್ಗೆ ರೈತರು ಗಮನಕ್ಕೆ ತಂದಿದ್ದಾರೆ. ಜೊತೆಗೆ ಬೇರೆ ಕಡೆ ಓಡಾಡಲು ರೈತರ ವಾಹನಗಳನ್ನು ಬಿಡುತ್ತಿಲ್ಲ, ತೊಂದರೆ ಪಡುತ್ತಿದ್ದಾರೆ ಎಂಬ ಬಗ್ಗೆ ಸಹ ಚರ್ಚೆಯಾಗಿದೆ. ಕೃಷಿ ಚಟುವಟಿಕೆಗಳು ನಿಲ್ಲದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ತಿಳಿಸಿದ್ದೇನೆ ಎಂದಿದ್ದಾರೆ.

ಇನ್ನು ರೈತರು ತಮ್ಮ ಹಳ್ಳಿಗೆ, ಜಮೀನಿಗೆ ಹೋಗಲು ಲಾಕ್​​​ಡೌನ್​​ನಿಂದ ತೊಂದರೆಯಾಗುತ್ತಿದೆ ಎಂಬ ದೂರು ಬಂದ‌ ಹಿನ್ನೆಲೆಯಲ್ಲಿ ರೈತರ ಓಡಾಟಕ್ಕೆ ಗ್ರೀನ್ ಪಾಸ್ ವ್ಯವಸ್ಥೆ ಮಾಡುವಂತೆ ತಾಲೂಕು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇದರ ಜೊತೆಗೆ ರೈತರ ಟ್ರ್ಯಾಕ್ಟರ್​​ಗಳನ್ನು ರಿಪೇರಿ ಮಾಡಲು ಅವರ ಮನೆಗೆ ಟ್ರ್ಯಾಕ್ಟರ್ ಕಂಪನಿಯ ಮೆಕ್ಯಾನಿಕ್​​ಗಳಿಗೂ ಸಹ ಪಾಸ್ ವ್ಯವಸ್ಥೆ ಮಾಡಲು ತಿಳಿಸಿದ್ದೇವೆ ಎಂದಿದ್ದಾರೆ.

ABOUT THE AUTHOR

...view details