ಮೈಸೂರು :ಸಚಿವರುಗಳು, ಸಂಸದರು, ಶಾಸಕರುಗಳು ಸೇರಿ ಜನ ಪ್ರತಿನಿಧಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರೈತ ಮುಖಂಡರೇ ಹೇಳಿರುವ ಘಟನೆ ಇಂದು ನಡೆದಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.
ಅಧಿಕಾರಿಗಳು, ಸಚಿವರು, ಸಂಸದರು, ಶಾಸಕರಿಗೆ ಸಾಮಾಜಿಕ ಅಂತರದ ಬಗ್ಗೆ ಎಚ್ಚರಿಸಿದ ರೈತ ಮುಖಂಡರು.. - ಸಾಮಾಜಿಕ ಅಂತರದ ಬಗ್ಗೆ ಸಚಿವರಿಗೆ ರೈತರ ಪಾಠ
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಭೆ ನಡೆಸುತ್ತಿದ್ದ ಸಚಿವರು,ಅಧಿಕಾರಿಗಳಿಗೆ ರೈತರೇ ಎದ್ದುನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಹೇಳಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ರೈತರಿಂದ ಸಾಮಾಜಿಕ ಅಂತರದ ಸಲಹೆ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದ ವೇಳೆ ರೈತ ಮುಖಂಡರೆಲ್ಲ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಆದರೆ, ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜನಪ್ರತಿನಿಧಿಗಳಾಗಲಿ ಇಲ್ಲ ಅಧಿಕಾರಿಗಳಾಗಲಿ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಇದಕ್ಕೆ ಸಭೆಯಲ್ಲಿದ್ದ ರೈತ ಮುಖಂಡರು ಆಕ್ಷೇಪಿಸಿದರಲ್ಲದೇ, ನಮಗಷ್ಟೇ ಸಾಮಾಜಿಕ ಅಂತರ ಅಲ್ಲ, ನೀವೂ ಕೂಡ ಅದನ್ನ ಪಾಲಿಸಬೇಕು ಅಂತಾ ಕಿವಿಮಾತು ಹೇಳಿದರು.
TAGGED:
mysore latest news