ಮೈಸೂರು: ಸಾಲಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.
ಬದುಕನ್ನೇ ಜಜ್ಜಿದ ಶುಂಠಿ, ಮೂರು ಬೋರ್ಗಳು ಫೇಲ್... ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ - ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಾಲಬಾಧೆಯಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕಣಿಯನಹುಂಡಿಯ ರೈತ ದೇವರಾಜು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಕಣಿಯನಹುಂಡಿಯ ರೈತ ದೇವರಾಜು (60),ಮೃತ. ತನ್ನ ಮೂರು ಎಕರೆ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆಯಲು, ದೇವರಾಜು 6 ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದ. ಬೆಳೆಗಾಗಿ ಜಮೀನಿನಲ್ಲಿ ಕೊರೆಸಿದ್ದ ಮೂರು ಬಾವಿಗಳಲ್ಲಿ ನೀರು ಬಾರದ ಕಾರಣ, ಶುಂಠಿ ಬೆಳೆಯು ಒಣಗಿ ಹೋಗಿ ಅಪಾರ ನಷ್ಟ ಉಂಟಾಗಿತ್ತು.
ಒಂದು ಕಡೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿತ್ತು. ಇನ್ನೊಂದೆಡೆ ಸಾಲ ನೀಡಿದವರು ಸಾಲ ವಾಪಸ್ ನೀಡುವಂತೆ ಒತ್ತಡ ಹೇರ ತೊಡಗಿದ್ದರು. ಇದರಿಂದಾಗಿ ಮನನೊಂದ ದೇವರಾಜು, ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈ ಕುರಿತು ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
former succied in mysore