ಕರ್ನಾಟಕ

karnataka

By

Published : Oct 5, 2020, 5:04 PM IST

ETV Bharat / state

ರಾಜಕೀಯ ದುರುದ್ದೇಶದಿಂದ ಡಿಕೆಶಿ ಮೇಲೆ ದಾಳಿ: ಮಾಜಿ ಸಂಸದ ಧ್ರುವನಾರಾಯಣ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ಮಾಜಿ ಸಂಸದ ಧ್ರುವನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ಹಾಳುಗೆಡವಿದೆ ಎಂದು ಗಂಭೀರ ಆರೋಪ ಮಾಡಿದ್ದು, ಬಿಜೆಪಿಯಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

Former MP Druvanarayan
ಮಾಜಿ ಸಂಸದ ಧ್ರುವನಾರಾಯಣ

ಮೈಸೂರು:ರಾಜಕೀಯ ದುರುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಲಾಗಿದೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಆರೋಪಿಸಿದ್ದಾರೆ.

ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗಷನ್ (ಸಿಬಿಐ) ಅಲ್ಲ, ಅದು ಕಮ್ಯೂನಲ್ ಬ್ಯೂರೋ ಆಫ್​​​​​​ ಇನ್ವೆಸ್ಟಿಗೇಷನ್. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಮಾಜಿ ಸಂಸದ ಧ್ರುವನಾರಾಯಣ ಪ್ರತಿಕ್ರಿಯೆ

ಚುನಾವಣೆ ಬಂದಾಗ ವಿರೋಧ ಪಕ್ಷದವರನ್ನು ಕುಗ್ಗಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಲೇ ಬರುತ್ತಿದೆ. ಹಾಗೆಯೇ ಉಪಚುನಾವಣೆ ಸೋಲಿನ ಭಯದಿಂದ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿಸಲಾಗಿದೆ. ಇದಕ್ಕೆಲ್ಲ ಹೆದರುವ ಜಾಯಮಾನ ನಮ್ಮದಲ್ಲ ಎಂದರು.

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಹೀಗೆ ಮುಂದುವರಿದರೆ, ಜನರೇ ಬಿಜೆಪಿಯನ್ನು ಸುಟ್ಟು ಭಸ್ಮ ಮಾಡ್ತಾರೆ. ‌ಸಿಎಂ ಯಡಿಯೂರಪ್ಪ ಅವರ ಮಗನ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಲು ಸರ್ಕಾರ ಮುಂದಾಗುತ್ತಿಲ್ಲ. ಬಿಜೆಪಿಯಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದರು.

ಸಿಬಿಐ, ಇಡಿ ಹಾಗೂ ದೇಶದ ತನಿಖಾ ಸಂಸ್ಥೆಗಳು, ಕೋಮುವಾದಿಗಳ ಪರವಾಗಿ ಕೆಲಸ ಮಾಡುತ್ತ, ವಿರೋಧ ಪಕ್ಷಗಳ ಮುಖಂಡರನ್ನು ಟಾರ್ಗೆಟ್ ಮಾಡುತ್ತಿವೆ. ಪೂರ್ವ ನಿಯೋಜಿತ ದಾಳಿ ಮಾಡಿ ಎದುರಾಳಿಗಳನ್ನು ಹೆದರಿಸುತ್ತಿವೆ ಎಂದು ಅವರು ಆರೋಪಿಸಿದರು.

ABOUT THE AUTHOR

...view details