ಕರ್ನಾಟಕ

karnataka

By

Published : Jan 9, 2021, 10:29 PM IST

ETV Bharat / state

ಬಿಜೆಪಿ ಮತಕ್ಕಾಗಿ ಧರ್ಮವನ್ನು ಬೀದಿಗೆ ತಂದಿದೆ.. ಮಾಜಿ ಸಂಸದ ಆರ್‌ ಧ್ರುವನಾರಾಯಣ್

ಗ್ರಾಪಂ ಚುನಾವಣೆಯಲ್ಲಿ ಸೋತವರು ಧೃತಿಗೆಡಬೇಡಿ. ನಾನು ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತದಲ್ಲಿ ಸೋತರೂ ಧೃತಿಗೆಟ್ಟಿಲ್ಲ. ನಾನು ಸೋತರೂ ರಾಜ್ಯದಲ್ಲಿ ಎರಡು ಬಾರಿ ಪ್ರವಾಸ ಮಾಡಿದ್ದೇನೆ. ಸೋಲನ್ನು ಸವಾಲಾಗಿ ಸ್ವೀಕರಿಸಿ. ಸೋಲಲಿ, ಗೆಲ್ಲಲಿ ಜನಪರವಾಗಿ ಕೆಲಸ ಮಾಡಿ..

Former MP Dhruvanarayan talk about bjp party
ಮಾಜಿ ಸಂಸದ ಧ್ರುವನಾರಾಯಣ್

ಮೈಸೂರು : ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿ, ಮತಕ್ಕಾಗಿ ಧರ್ಮವನ್ನು ಬೀದಿಗೆ ತಂದಿದೆ ಎಂದು ಮಾಜಿ ಸಂಸದ ಆರ್ ಧ್ರುವನಾರಾಯಣ್ ಹರಿಹಾಯ್ದಿದ್ದಾರೆ.

ಮಾಜಿ ಸಂಸದ ಧ್ರುವನಾರಾಯಣ್..

ಓದಿ: ಬಿಎಸ್​ವೈಗೆ ಹೈಕಮಾಂಡ್ ಬುಲಾವ್, ನಾಳೆ ದೆಹಲಿಯತ್ತ ಸಿಎಂ: ಸಂಪುಟ ವಿಸ್ತರಣೆ ಚರ್ಚೆ ಸಾಧ್ಯತೆ!

ನಂಜನಗೂಡಿನಲ್ಲಿ ಗ್ರಾಮ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಬಳಿ ಹೋದ್ರೆ, ಬಿಜೆಪಿ ಧರ್ಮದ ಹೆಸರಿನಲ್ಲಿ ಜನರ ಬಳಿ ಹೋಗುತ್ತಿದೆ.

ಹನುಮ ಜಯಂತಿ ಹಾಗೂ ರಾಮನ ಪೂಜೆ ಹಿಂದಿನಿಂದಲೂ ಹಳ್ಳಿ ಹಳ್ಳಿಗಳಲ್ಲಿ ಅದೇ ನಡೆಯುತ್ತ ಬಂದಿದೆ. ಆದರೆ, ಬಿಜೆಪಿ ಅವರು ಯುವಕರನ್ನ ಪ್ರಚೋದನೆ ಮೂಲಕ ದಾರಿ ತಪ್ಪಿಸುತ್ತದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಊಳುವವನೇ ನೆಲೆದೊಡೆಯ ಎಂದು ಮಾಡಿ ರೈತರ ಪರ ನಿಂತರೆ, ಬಿಜೆಪಿಯವರು ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ, ಉಳ್ಳವರೇ ಭೂಮಿ ಮಾಲೀಕರು ಎಂದು ಮಾಡುತ್ತಿದೆ.‌‌ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಪಿಎಂಸಿ ಮುಚ್ಚುವ ಹುನ್ನಾರ ಮಾಡುತ್ತಿದೆ. ಬಡವರ ಹಾಗೂ ರೈತರ ವಿರೋಧಿ ಕೇಂದ್ರ ಸರ್ಕಾರ ದೇಶ ಆಳುತ್ತಿದೆ ಎಂದು ಕುಟುಕಿದರು.

ಗ್ರಾಪಂ ಚುನಾವಣೆಯಲ್ಲಿ ಸೋತವರು ಧೃತಿಗೆಡಬೇಡಿ. ನಾನು ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತದಲ್ಲಿ ಸೋತರೂ ಧೃತಿಗೆಟ್ಟಿಲ್ಲ. ನಾನು ಸೋತರೂ ರಾಜ್ಯದಲ್ಲಿ ಎರಡು ಬಾರಿ ಪ್ರವಾಸ ಮಾಡಿದ್ದೇನೆ. ಸೋಲನ್ನು ಸವಾಲಾಗಿ ಸ್ವೀಕರಿಸಿ. ಸೋಲಲಿ, ಗೆಲ್ಲಲಿ ಜನಪರವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈಗ ಪಕ್ಷಕ್ಕೆ ತಳಮಟ್ಟದಿಂದ ಅಭಿವೃದ್ಧಿಯಾಗಬೇಕಿದೆ. ಕಷ್ಟಪಟ್ಟು ಕೆಲಸ ಮಾಡಿದ್ರೆ ಜನ ಆಶೀರ್ವಾದ ಮಾಡುತ್ತಾರೆ ಎಂದರು.

ABOUT THE AUTHOR

...view details