ಮೈಸೂರು: ನಗರದಲ್ಲಿ ಕೊರೊನಾ ಮಹಾಮಾರಿಯ ಬಗ್ಗೆ ಕೆಲವು ಅಧಿಕಾರಿಗಳು ಸರಿಯಾಗಿ ನಿಗಾ ವಹಿಸಿ ಕೆಲಸ ಮಾಡುತ್ತಿಲ್ಲ, ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಿಎಂಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಅಸಮರ್ಥ ಅಧಿಕಾರಿಗಳನ್ನ ವಾಪಸ್ ಕರೆಸಿಕೊಳ್ಳಿ: ಸಿಎಂಗೆ ಎಚ್.ವಿಶ್ವನಾಥ್ ಮನವಿ - CM BSY
ಮೈಸೂರು ನಗರದಲ್ಲಿ ಕೊರೊನಾ ಮಹಾಮಾರಿಯ ನರ್ತನ ಜಾಸ್ತಿಯಾಗಿದೆ. ಕೆಲವು ಇಲಾಖೆಯ ಅಧಿಕಾರಿಗಳು ನನಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಮುಖ್ಯಮಂತ್ರಿಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ, ತಾವು ಮೈಸೂರು ಜಿಲ್ಲೆಯಿಂದ ಅಸಮರ್ಥ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡು ಸಮರ್ಥ ಅಧಿಕಾರಿಗಳನ್ನು ಕಳುಹಿಸಿ ಎಂದು ಮನವಿ ಮಾಡಿದರು.
![ಅಸಮರ್ಥ ಅಧಿಕಾರಿಗಳನ್ನ ವಾಪಸ್ ಕರೆಸಿಕೊಳ್ಳಿ: ಸಿಎಂಗೆ ಎಚ್.ವಿಶ್ವನಾಥ್ ಮನವಿ hvishwanath](https://etvbharatimages.akamaized.net/etvbharat/prod-images/768-512-6593922-thumbnail-3x2-vishwanath.jpg)
ಸ್ವತಃ ವಿಡಿಯೋ ಮಾಡಿರುವ ಎಚ್.ವಿಶ್ವನಾಥ್, ಮೈಸೂರು ನಗರದಲ್ಲಿ ಕೊರೊನಾ ಮಹಾಮಾರಿಯ ನರ್ತನ ಜಾಸ್ತಿಯಾಗಿದೆ. ಕೆಲವು ಇಲಾಖೆಯ ಅಧಿಕಾರಿಗಳು ನನಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಪಕ್ಕದ ನಂಜನಗೂಡು ನರಕ ಸದೃಶವಾಗಿದೆ. ಹಲವು ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಬಹುಶಃ ಮೈಸೂರು ನಗರ ಕೊರೊನಾ ಮರಣ ಮೃದಂಗ ಬಾರಿಸುವ ನಗರಗಳಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲಬಹುದು ಎಂದು ಭಾಸವಾಗುತ್ತದೆ.
ಹಾಗಾಗಿ ನಾನು ಮುಖ್ಯಮಂತ್ರಿಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ, ತಾವು ಮೈಸೂರು ಜಿಲ್ಲೆಯಿಂದ ಅಸಮರ್ಥ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡು ಸಮರ್ಥ ಅಧಿಕಾರಿಗಳನ್ನು ಕಳುಹಿಸಿ, ವಿಶೇಷ ತಂಡವನ್ನು ರಚಿಸಿ ಮೈಸೂರು ಮುಂದೆ ಕೊರೊನಾ ಮಹಾಮಾರಿಯ ಹಿಡಿತದಿಂದ ನಲುಗಿ ಹೋಗುವುದನ್ನು ತಪ್ಪಿಸಬೇಕೆಂದು ವಿನಂತಿ ಮಾಡುತ್ತೇನೆ ಎಂದು ಸ್ವತಃ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.