ಕರ್ನಾಟಕ

karnataka

ETV Bharat / state

ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರೆಗೆ ಎಸ್‌.ಎಂ.ಕೃಷ್ಣ ಚಾಲನೆ - ಮೈಸೂರು ದಸರಾಗೆ ಎಸ್.ಎಂ.ಕೃಷ್ಣ ಚಾಲನೆ

ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಾಡಹಬ್ಬಕ್ಕೆ ಚಾಲನೆ ನೀಡಿದರು.

Former CM SM Krishna inaugurated mysuru dasara
ವಿಶ್ವವಿಖ್ಯಾತ ದಸರಾ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚಾಲನೆ

By

Published : Oct 7, 2021, 8:49 AM IST

Updated : Oct 7, 2021, 9:36 AM IST

ಮೈಸೂರು:ವಿಶ್ವವಿಖ್ಯಾತ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರತಿದೆ. ಉತ್ಸವದ ಉದ್ಘಾಟಕರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಿದರು.

ಚಾಮುಂಡಿ‌ ಬೆಟ್ಟದಲ್ಲಿ ಆಯೋಜನೆಗೊಂಡಿದ್ದ ವೇದಿಕೆಯಲ್ಲಿ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ 8.26ಕ್ಕೆ ಸಂದ ಶುಭ ತುಲಾ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿತು. ಈ ಮೂಲಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಸ್​.ಟಿ. ಸೋಮಶೇಖರ್​ ಇತರ ಅನೇಕ ಗಣ್ಯರು ಭಾಗವಹಿಸಿದ್ದರು.

ನಾಡಹಬ್ಬ ದಸರೆಗೆ ಎಸ್‌.ಎಂ.ಕೃಷ್ಣ ಚಾಲನೆ

ಇದಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಗಣ್ಯರಿಗೆ ಜಿಲ್ಲಾಡಳಿತದಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಗಣ್ಯರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದು ವೇದಿಕೆಗೆ ಆಗಮಿಸಿದರು.

ಇದನ್ನೂ ಓದಿ:ಮುಖ್ಯಮಂತ್ರಿ, ಪ್ರಧಾನಿಯಾಗಿ ರಾಜ್ಯಭಾರ: ದೇಶದಲ್ಲಿ 2 ದಶಕ ಪೂರೈಸಿದ ನರೇಂದ್ರ ಮೋದಿ ಆಡಳಿತ

Last Updated : Oct 7, 2021, 9:36 AM IST

ABOUT THE AUTHOR

...view details