ಕರ್ನಾಟಕ

karnataka

ETV Bharat / state

ವಿಶ್ವನಾಥ್​ ತಮ್ಮನ್ನು ಹೊಗಳ್ತಿರೋದು ಯಾಕೆ ಅಂತಾ ಸಿದ್ದರಾಮಯ್ಯರೇ  ಹೇಳ್ತಾರೆ ಕೇಳಿ! - Former CM Siddaramaiah campaign in Hunsur

ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ವಿರುದ್ಧವೇ ವಿಶ್ವನಾಥ್ ಪತ್ರ ಬರೆದಿದ್ದ, ಈಗ ಮತಕ್ಕಾಗಿ ಅಷ್ಟೇ ನನ್ನನ್ನು ಹೊಗಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವನಾಥ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಣಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ, Former CM Siddaramaiah campaign in Hunsur
ಹುಣಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ

By

Published : Dec 3, 2019, 12:39 PM IST

Updated : Dec 3, 2019, 3:12 PM IST

ಮೈಸೂರು: ವೋಟಿನ ತಂತ್ರದ ಭಾಗವಾಗಿ ವಿಶ್ವನಾಥ್ ನನ್ನನ್ನು ಹೊಗಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಹುಣಸೂರು ಪಟ್ಟಣದ ದೇವರಾಜ ಅರಸು ಪುತ್ಥಳಿಗೆ ಮಾರ್ಲಾಪಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ವಿರುದ್ಧವೇ ಪತ್ರ ಬರೆದಿದ್ದ, ಈಗ ಮತಕ್ಕಾಗಿ ಅಷ್ಟೇ ಹೊಗಳುತ್ತಿದ್ದಾರೆ ಎಂದರು.

’ಜೆಡಿಎಸ್, ಬಿಜೆಪಿ ಇಬ್ಬರೂ ನಮಗೆ ವೈರಿಗಳೇ’: ಸಿದ್ದರಾಮಯ್ಯ

ನಾನು ಅಹಿಂದ ಸಮಾವೇಶ ಮಾಡಿದ್ದಕ್ಕೆ ಜೆಡಿಎಸ್​ ವರಿಷ್ಠ ಹೆಚ್‌.ಡಿ. ದೇವೇಗೌಡರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ರು. ಆಗ ನಾನು ಆರು ತಿಂಗಳು ಮನೆಯಲ್ಲಿದ್ದಾಗ, ಮಂಚನಹಳ್ಳಿ ಮಹದೇವು ಅವರು ಸಹಾಯ ಮಾಡಿದ್ರು. ಆದ್ರೆ, 2008ರಲ್ಲಿ ಅವರಿಗೆ ಟಿಕೆಟ್ ತಪ್ಪಿಸಿ ವಿಶ್ವನಾಥ್ ಗೆ ಕೊಟ್ಟಿದ್ದೆ. ಬಳಿಕ ವಿಶ್ವನಾಥ್​ ನನಗೆ ಮೋಸ ಮಾಡಿದ್ದಾನೆ. ವಿಶ್ವನಾಥ್ ಸುಳ್ಳನ್ನು ಹೇಳಿಕೊಂಡು ಬಂದಿದ್ದಾನೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಹುಣಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ

ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚನೆ ಅಸಾಧ್ಯ: ದೇವೇಗೌಡ

ಸಿಎಂ ಯಡಿಯೂರಪ್ಪ ಅವರು ದುಡ್ಡು ಹಾಗೂ ಜಾತಿ ಇಲ್ಲದೇ ಚುನಾವಣೆ ಎದುರಿಸಿದ್ದಾರೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಗೋಕಾಕ್ ನಲ್ಲಿ ಲಿಂಗಾಯತರು ಬಿಜೆಪಿಗೆ ಮತಹಾಕಿ ಅಂತಾರೆ. ಮಾಧುಸ್ವಾಮಿ ಕೂಡ ಹಾಗೆಯೇ ಹೇಳ್ತಾರೆ. ಆದರೆ ನಾವು ಜಾತ್ಯತೀತವಾಗಿ ಮತ ಕೇಳುತ್ತಿದ್ದೇವೆ ಎಂದರು.

ಇನ್ನು ಜೆಡಿಎಸ್-ಕಾಂಗ್ರೆಸ್ ನಡುವೆ ಯಾವುದೇ ಒಳ ಒಪ್ಪಂದವಾಗಿಲ್ಲ. ಡಿ.9ರ ಫಲಿತಾಂಶದ ನಂತರ ಮುಂದೆ ಚರ್ಚೆ ಮಾಡುತ್ತೇವೆ. ಅನರ್ಹರು ಮಾಡಿರುವ ಮೋಸದಿಂದ ಮತದಾರರು ಆಕ್ರೋಶಗೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.

Last Updated : Dec 3, 2019, 3:12 PM IST

For All Latest Updates

TAGGED:

ABOUT THE AUTHOR

...view details