ಮೈಸೂರು: ನಾನು ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ. ಕಾಂಗ್ರೆಸ್ ನವರು ನನ್ನನು ಆಡಳಿತ ನಡೆಸಲು ಬಿಡಲಿಲ್ಲ. ಸಿಎಂ ಆಗಿ ಇರಲು ಸಿದ್ದರಾಮಯ್ಯ ಗುಂಪು ಬಿಡಲಿಲ್ಲ. ಆದರೆ, ಈ ರೀತಿ ಬಿಜೆಪಿಯವರು ದ್ರೋಹ ಮಾಡಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್ಡಿಕೆ ಹೀಗೆ ಹೇಳಿದ್ಯಾಕೆ?
ನನಗೆ ಬಿಜೆಪಿ ಜೊತೆ ಸಂಬಂಧ ಇದ್ದಿದ್ದರೆ ನಾನೇ ಸಿಎಂ ಆಗಿ ಮುಂದುವರೆಯುತ್ತಿದ್ದೆ. ಕಾಂಗ್ರೆಸ್ನವರ ಸಹವಾಸ ಮಾಡಿ 12 ವರ್ಷಗಳ ಕಾಲ ಇದ್ದ ಗುಡ್ ವಿಲ್ ಅನ್ನು ಕಳೆದುಕೊಂಡೆ. ನಾನು ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತಿದ್ದು, ಬಿಜೆಪಿ ಓಟ ತಡೆಯಲು ಇದಕ್ಕೆ ಸಾಧ್ಯವಾಗಿಲ್ಲ. ಅದನ್ನು ತಡೆಯಲು ಇತರ ಎಲ್ಲ ಸಿಎಂಗಳು ಸೇರಿ ಪುನಃ ತೃತೀಯ ರಂಗದ ರಚನೆ ಬಗ್ಗೆ ಮಾತುಕತೆ ನಡೆಸುತ್ತೇವೆ. ನನಗೆ ಬಿಜೆಪಿ ಜೊತೆ ಸಂಬಂಧ ಇದ್ದಿದ್ದರೆ ನಾನೇ ಸಿಎಂ ಆಗಿ ಮುಂದುವರೆಯುತ್ತಿದ್ದೆ. ಕಾಂಗ್ರೆಸ್ನವರ ಸಹವಾಸ ಮಾಡಿ 12 ವರ್ಷಗಳ ಕಾಲ ಇದ್ದ ಗುಡ್ ವಿಲ್ ಅನ್ನು ಕಳೆದುಕೊಂಡೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಒಳ್ಳೆಯ ಕೆಲಸ ಮಾಡಿದರೂ ಕಾಂಗ್ರೆಸ್ನವರು ಸಹಿಸಲಿಲ್ಲ, ಅಪಪ್ರಚಾರ ನಡೆಸಿದ್ದರು. ಸಿದ್ದರಾಮಯ್ಯ ಕದ್ದುಮುಚ್ಚಿ ಯಾರನ್ನೆಲ್ಲ ಭೇಟಿ ಮಾಡಿದ್ದರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.