ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಪ್ರಚೋದನಾತ್ಮಕ ಕೃತ್ಯಗಳಿಗೆ ಎರಡು ಪಕ್ಷಗಳಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿ ಆಜಾನ್ ದಂಗಲ್ ವಿಚಾರದಲ್ಲಿ ಸರ್ಕಾರ ವಿಧಾನಸೌಧದಲ್ಲಿ ಎಲ್ಲಾ ಧಾರ್ಮಿಕ ಮುಖಂಡರ ಸಭೆ ಕರೆದು ಚರ್ಚೆ ಮಾಡಿ ಸ್ಪಷ್ಟ ಸಂದೇಶವನ್ನು ಜನರಿಗೆ ನೀಡಬೇಕು. ಇದನ್ನು ಬೆಳೆಯಲು ಬಿಡಬಾರದು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ರಾಜ್ಯದಲ್ಲಿ ಒಬ್ರು ಬೆಂಕಿ ಹಚ್ತಾರೆ, ಮತ್ತೊಬ್ರು ಪೆಟ್ರೋಲ್ ಸುರೀತಾರೆ: ಹೆಚ್‌ಡಿಕೆ - ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಎರಡೂ ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ. ಈಶ್ವರಪ್ಪನನ್ನು ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಜೊತೆಗೆ ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ್ಯಗಳಿದ್ದರೆ ಬಂಧಿಸಿ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ರಾಜ್ಯದಲ್ಲಿ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ ಎಂದ ಹೆಚ್‌ಡಿಕೆ ಕಿಡಿ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಪಕ್ಷಗಳು ಎಲ್ಲಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಸಮಸ್ಯೆಯನ್ನು 5 ನಿಮಿಷಕ್ಕೆ ಬಗೆಹರಿಸಬಹುದು. ಆದರೆ, ಆ ಕೆಲಸ ಮಾಡುತ್ತಿಲ್ಲ. ಈಶ್ವರಪ್ಪನನ್ನ ಬಂಧಿಸಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ವಿರೋಧಿಸುತ್ತಿಲ್ಲ. ಜೊತೆಗೆ ಈಶ್ವರಪ್ಪನವರ ಬಂಧನಕ್ಕೆ ತಕ್ಕ ಸಾಕ್ಷ್ಯಗಳಿದ್ದರೆ ಬಂಧಿಸಿ. ಆದರೆ, ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ. ಈಶ್ವರಪ್ಪನವರ ಪರ ಮಾತನಾಡಲು ನಾನು ಅವರ ಲಾಯರ್ ಅಲ್ಲ ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲೂ ಆಪ್ ಆಡಳಿತದ ನಡೆಸಲಿದೆ: ಕೇಜ್ರಿವಾಲ್ ವಿಶ್ವಾಸ