ಮೈಸೂರು : ನಮಗೆ ಬಹುಮತ ಬಂದು ಸರ್ಕಾರ ರಚನೆಯಾದ ಮೇಲೆ ನಾನು ಮಾಡಬೇಕೆಂದಿರುವ ಪಂಚರತ್ನ ಯೋಜನೆಯನ್ನ 5 ವರ್ಷದೊಳಗೆ ಅನುಷ್ಠಾನ ಮಾಡದೆ ಹೋದರೆ ನಮ್ಮ ಜೆಡಿಎಸ್ ಪಕ್ಷವನ್ನ ಸಂಪೂರ್ಣವಾಗಿ ಮುಚ್ಚುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಯೋಜನೆಗಳನ್ನು ನಾನು ಅನುಷ್ಠಾನಕ್ಕೆ ತರದೆ ಹೋದರೆ ಜೆಡಿಎಸ್ ಪಕ್ಷ ಮುಚ್ಚುತ್ತೇನೆ: ಹೆಚ್ಡಿಕೆ - ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ರೈತರು ಮಹಿಳೆಯರು ಬಡವರಿಗೆ ಅನೇಕ ಯೋಜನೆಗಳನ್ನ ಹಾಕಿದ್ದೇನೆ. ಪಂಚರತ್ನ ಯೋಜನೆಯ ಮೂಲಕ ಕರ್ನಾಟಕ ಅಭಿವೃದ್ಧಿಗೆ ಪೂರ್ವ ತಯಾರಿ ನಡೆಸಿದ್ದೇನೆ. ನೀವೆಲ್ಲರೂ ನನಗೆ ಬಹುಮತ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಪರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತಯಾಚನೆ ಮಾಡಿದರು..
ತುರುಗನೂರು ಗ್ರಾಮದ ಲಕ್ಷ್ಮಿವೆಂಕಟೇಶ್ವರ ಭವನದಲ್ಲಿ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, 2023 ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ನಾನು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಚನೆ ಮಾಡಿಕೊಂಡಿದ್ದೇನೆ, ನೀವು ಅವಕಾಶ ನೀಡಿದರೆ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ ಎಂದರು.
ರೈತರು ಮಹಿಳೆಯರು ಬಡವರಿಗೆ ಅನೇಕ ಯೋಜನೆಗಳನ್ನ ಹಾಕಿದ್ದೇನೆ. ಪಂಚರತ್ನ ಯೋಜನೆಯ ಮೂಲಕ ಕರ್ನಾಟಕ ಅಭಿವೃದ್ಧಿಗೆ ಪೂರ್ವ ತಯಾರಿ ನಡೆಸಿದ್ದೇನೆ. ನೀವೆಲ್ಲರೂ ನನಗೆ ಬಹುಮತ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಪರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತಯಾಚನೆ ಮಾಡಿದರು.