ಕರ್ನಾಟಕ

karnataka

ETV Bharat / state

ಕಾಡಿನಿಂದ ಹೊರಬಂದ ಹುಲಿ.. ಸೆರೆಗಾಗಿ ಆನೆಗಳ ಮೂಲಕ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು

ಹುಲಿ ಸೆರೆಯಾಗದ ಪರಿಣಾಮ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಂದು ರಾಂಪುರ ಆನೆ ಶಿಬಿರದಿಂದ ಗಣೇಶ, ಪಾರ್ಥ ಹಾಗೂ ಜಯಪ್ರಕಾಶ ಎಂಬ ನಾಮಾಂಕಿತ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಿದ್ದಾರೆ..

Forest officers searching for a tiger
ಹುಲಿ ಸೆರೆಗಾಗಿ ಆನೆಗಳ ಮೂಲಕ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು

By

Published : Sep 2, 2020, 9:21 PM IST

ಮೈಸೂರು :ಹೆಚ್‌ ಡಿ ಕೋಟೆ ತಾಲೂಕಿನ ಕಳಸೂರು, ಮೂರುಬಂದ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಯೊಂದು ಕಾಣಿಸಿದ್ದು, ಸಾಕಾನೆಗಳ ಮೂಲಕ ಅರಣ್ಯ ಇಲಾಖೆಯು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಶುರು ಮಾಡಿದೆ. ಕಳೆದ 6 ದಿನಗಳಿಂದ ಅರಣ್ಯ ಇಲಾಖೆಯು ಹುಲಿಯ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆ ಚುರುಕುಗೊಳಿಸಲು ಬುಧವಾರ ಸಾಕಾನೆಗಳನ್ನು ಕರೆತರಲಾಯಿತು.

ಹುಲಿ ಸೆರೆಗಾಗಿ ಆನೆಗಳ ಮೂಲಕ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು

ತಾಲೂಕಿನ ಎನ್ ಬೇಗೂರು ವಲಯದ ಹುಲಿಯೊಂದು ಕಾಡಿನಿಂದ ಹೊರಬಂದಿರುವ ಸುಳಿವು ಪಡೆದುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ಸತತ ಪ್ರಯತ್ನ ನಡೆಸಿದ್ದಾರೆ. ಹುಲಿ ಸೆರೆಯಾಗದ ಪರಿಣಾಮ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಂದು ರಾಂಪುರ ಆನೆ ಶಿಬಿರದಿಂದ ಗಣೇಶ, ಪಾರ್ಥ ಹಾಗೂ ಜಯಪ್ರಕಾಶ ಎಂಬ ನಾಮಾಂಕಿತ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಿದ್ದಾರೆ.

ಹುಲಿ ಸೆರೆಗಾಗಿ ಆನೆಗಳ ಮೂಲಕ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು

ಎನ್.ಬೇಗೂರು ವಲಯದ ಸುಮಾರು 10 ವರ್ಷದ ಗಂಡು ಹುಲಿ ಎಂದು ಹೇಳಲಾಗುತ್ತಿದ್ದು, ಕಾಡಂಚಿನ ಅಕ್ಕ-ಪಕ್ಕದ ಜಮೀನುಗಳಲ್ಲಿ ಮೇಯಲು ಬರುವ ಜಾನುವಾರಗಳನ್ನು ಹಿಡಿಯಲು ಕಾಡಿನಿಂದ ಹೊರ ಬಂದಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಎನ್.ಬೇಗೂರು ವಲಯ ಅರಣ್ಯಧಿಕಾರಿ ಚೇತನ್, ವಿಶೇಷ ಹುಲಿ ಸಂರಕ್ಷಣಾ ಪಡೆಯ ಡಿಆರ್​ಎಫ್​ಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.

ಹುಲಿ ಸೆರೆಗಾಗಿ ಆನೆಗಳ ಮೂಲಕ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು

ABOUT THE AUTHOR

...view details